ದಾನಿಯೇಲನು 12:4

ಆದರೆ ಓ ದಾನಿಯೇಲನೇ, ನೀನು ಅಂತ್ಯ ಕಾಲದ ವರೆಗೂ ಈ ಮಾತುಗಳನ್ನು ಮುಚ್ಚಿಡು; ಅವುಗಳನ್ನು ಬರೆಯುವ ಆ ಗ್ರಂಥಕ್ಕೆ ಮುದ್ರೆಹಾಕು; ಅನೇಕರು ಅತ್ತಿತ್ತ ಓಡಾಡುವರು ಮತ್ತು ಜ್ಞಾನವು ಹೆಚ್ಚಾಗುವದು ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 12

2ಭೂಮಿಯ ಧೂಳಿನೊಳಗೆ ನಿದ್ರೆಮಾಡುವವ ರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವವನ್ನೂ ಕೆಲವರು ನಿತ್ಯ ನಾಚಿಕೆಗಳನ್ನೂ ಅನುಭವಿಸುವರು.

3ಬುದ್ಧಿವಂತರಾದವರು ಆಕಾಶದ ಕಾಂತಿಯ ಹಾಗೆ ಯೂ ಅನೇಕರನ್ನು ನೀತಿಯ ಕಡೆಗೆ ತಿರುಗಿಸಿದ ವರು ನಕ್ಷತ್ರಗಳ ಹಾಗೆಯೂ ಎಂದೆಂದಿಗೂ ಪ್ರಕಾಶಿಸು ವರು;

4ಆದರೆ ಓ ದಾನಿಯೇಲನೇ, ನೀನು ಅಂತ್ಯ ಕಾಲದ ವರೆಗೂ ಈ ಮಾತುಗಳನ್ನು ಮುಚ್ಚಿಡು; ಅವುಗಳನ್ನು ಬರೆಯುವ ಆ ಗ್ರಂಥಕ್ಕೆ ಮುದ್ರೆಹಾಕು; ಅನೇಕರು ಅತ್ತಿತ್ತ ಓಡಾಡುವರು ಮತ್ತು ಜ್ಞಾನವು ಹೆಚ್ಚಾಗುವದು ಎಂದು ಹೇಳಿದನು.

5ಆಗ ದಾನಿಯೇಲನೆಂಬ ನಾನು ನೋಡಿದೆನು; ಇಗೋ, ಬೇರೆ ಇಬ್ಬರಲ್ಲಿ ಒಬ್ಬನು ನದಿಯ ತೀರದ ಈ ಕೊನೆಗೂ ಮತ್ತೊಬ್ಬನು ನದಿಯ ತೀರದ ಆ ಕೊನೆಗೂ ನಿಂತಿದ್ದರು.

6ಅವರು ನದಿಯ ನೀರಿನ ಮೇಲೆ ನಿಂತು ನಾರು ಬಟ್ಟೆಯನ್ನು ಧರಿಸಿದ್ದ ಒಬ್ಬನಿಗೆ ಇನ್ನೊಬ್ಬನು ಹೇಳಿದ್ದೇನಂದರೆ--ಈ ಆಶ್ಚರ್ಯದ ಅಂತ್ಯವು ಎಷ್ಟರ ವರೆಗೆ ಇರುವದು ಎಂದು ಅಂದಾಗ

ದಾನಿಯೇಲನು 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी