ನ್ಯಾಯಸ್ಥಾಪಕರು 9:36

ಗಾಳನು ಆ ಜನರನ್ನು ಕಂಡಾಗ--ಇಗೋ, ಬೆಟ್ಟದ ಶಿಖರಗಳಿಂದ ಜನರು ಇಳಿದು ಬರುತ್ತಾರೆ ಎಂದು ಜೆಬುಲನಿಗೆ ಹೇಳಿದನು. ಜೆಬುಲನು ಅವನಿಗೆ--ನೀನು ಬೆಟ್ಟಗಳ ನೆರಳನ್ನು ಮನುಷ್ಯರಂತೆ ನೋಡುತ್ತೀ ಅಂದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 9

34ಹಾಗೆಯೇ ಅಬೀಮೆಲೆಕನೂ ಅವನ ಸಂಗಡ ಇದ್ದ ಸಮಸ್ತ ಜನರೂ ರಾತ್ರಿಯಲ್ಲಿ ಎದ್ದು ಶೆಕೆಮಿಗೆ ವಿರೋಧವಾಗಿ ನಾಲ್ಕು ಗುಂಪಾಗಿ ಹೊಂಚಿ ಕೊಂಡಿದ್ದರು.

35ಎಬೆದನ ಮಗನಾದ ಗಾಳನು ಹೊರಟು ಬಂದು ಪಟ್ಟಣದ ಬಾಗಲಿನ ದ್ವಾರದಲ್ಲಿ ನಿಂತನು. ಆಗ ಹೊಂಚಿಕೊಂಡಿದ್ದ ಅಬೀಮೆಲೆಕನೂ ಅವನ ಸಂಗಡ ಇದ್ದ ಜನರೂ ಎದ್ದುಬಂದರು.

36ಗಾಳನು ಆ ಜನರನ್ನು ಕಂಡಾಗ--ಇಗೋ, ಬೆಟ್ಟದ ಶಿಖರಗಳಿಂದ ಜನರು ಇಳಿದು ಬರುತ್ತಾರೆ ಎಂದು ಜೆಬುಲನಿಗೆ ಹೇಳಿದನು. ಜೆಬುಲನು ಅವನಿಗೆ--ನೀನು ಬೆಟ್ಟಗಳ ನೆರಳನ್ನು ಮನುಷ್ಯರಂತೆ ನೋಡುತ್ತೀ ಅಂದನು.

37ಗಾಳನು ತಿರಿಗಿ ಅವನ ಸಂಗಡ ಮಾತ ನಾಡಿ--ಇಗೋ, ಜನರು ಭೂಮಧ್ಯಸ್ಥಳದಿಂದ ಬರು ತ್ತಾರೆ; ಮಿಯೋನೀಮಿನ ಬೈಲುಮಾರ್ಗವಾಗಿ ಒಂದು ಗುಂಪು ಬರುತ್ತದೆ ಅಂದನು.

38ಆಗ ಜೆಬುಲನು ಅವನಿಗೆ--ನಾವು ಅವನನ್ನು ಸೇವಿಸುವ ಹಾಗೆ ಅಬೀ ಮೆಲೆಕನು ಯಾರು ಎಂದು ನೀನು ಹೇಳಿದ ನಿನ್ನ ಬಾಯಿ ಈಗ ಎಲ್ಲಿ? ಅದು ನೀನು ಅಲಕ್ಷ್ಯಮಾಡಿದ ಜನವಲ್ಲವೋ? ಈಗ ನೀನು ಹೊರಟು ಅವರ ಸಂಗಡ ಯುದ್ಧಮಾಡು ಅಂದನು.

ನ್ಯಾಯಸ್ಥಾಪಕರು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी