ನ್ಯಾಯಸ್ಥಾಪಕರು 9:34

ಹಾಗೆಯೇ ಅಬೀಮೆಲೆಕನೂ ಅವನ ಸಂಗಡ ಇದ್ದ ಸಮಸ್ತ ಜನರೂ ರಾತ್ರಿಯಲ್ಲಿ ಎದ್ದು ಶೆಕೆಮಿಗೆ ವಿರೋಧವಾಗಿ ನಾಲ್ಕು ಗುಂಪಾಗಿ ಹೊಂಚಿ ಕೊಂಡಿದ್ದರು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 9

32ಆದದ ರಿಂದ ಈಗ ನೀನೂ ನಿನ್ನ ಸಂಗಡ ಇರುವ ಜನರೂ ಕೂಡಿ ರಾತ್ರಿಯಲ್ಲಿ ಎದ್ದು ಹೊಲದಲ್ಲಿ ಹೊಂಚಿಕೊಳ್ಳ ಬೇಕು.

33ಹೊತ್ತಾರೆ ಸೂರ್ಯನು ಉದಯಿಸುವಾಗ ನೀನು ಎದ್ದು ಪಟ್ಟಣದ ಮೇಲೆ ಬೀಳಬೇಕು; ಇಗೋ, ಅವನೂ ಅವನ ಸಂಗಡ ಇರುವ ಜನರೂ ನಿಮಗೆದು ರಾಗಿ ಹೊರಟು ಬರುವಾಗ ನಿನಗೆ ಅನುಕೂಲ ತೋರಿದ ಹಾಗೆ ಅವನಿಗೆ ಮಾಡಬಹುದು ಎಂದು ಹೇಳಿದನು.

34ಹಾಗೆಯೇ ಅಬೀಮೆಲೆಕನೂ ಅವನ ಸಂಗಡ ಇದ್ದ ಸಮಸ್ತ ಜನರೂ ರಾತ್ರಿಯಲ್ಲಿ ಎದ್ದು ಶೆಕೆಮಿಗೆ ವಿರೋಧವಾಗಿ ನಾಲ್ಕು ಗುಂಪಾಗಿ ಹೊಂಚಿ ಕೊಂಡಿದ್ದರು.

35ಎಬೆದನ ಮಗನಾದ ಗಾಳನು ಹೊರಟು ಬಂದು ಪಟ್ಟಣದ ಬಾಗಲಿನ ದ್ವಾರದಲ್ಲಿ ನಿಂತನು. ಆಗ ಹೊಂಚಿಕೊಂಡಿದ್ದ ಅಬೀಮೆಲೆಕನೂ ಅವನ ಸಂಗಡ ಇದ್ದ ಜನರೂ ಎದ್ದುಬಂದರು.

36ಗಾಳನು ಆ ಜನರನ್ನು ಕಂಡಾಗ--ಇಗೋ, ಬೆಟ್ಟದ ಶಿಖರಗಳಿಂದ ಜನರು ಇಳಿದು ಬರುತ್ತಾರೆ ಎಂದು ಜೆಬುಲನಿಗೆ ಹೇಳಿದನು. ಜೆಬುಲನು ಅವನಿಗೆ--ನೀನು ಬೆಟ್ಟಗಳ ನೆರಳನ್ನು ಮನುಷ್ಯರಂತೆ ನೋಡುತ್ತೀ ಅಂದನು.

ನ್ಯಾಯಸ್ಥಾಪಕರು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी