ತೀತನಿಗೆ 2:10

ಯಾವದನ್ನೂ ಕದ್ದಿಟ್ಟು ಕೊಳ್ಳದೆ ಪೂರಾ ನಂಬಿಗಸ್ತರೆಂದು ತೋರಿಸಿಕೊಂಡು ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯ ಗಳಲ್ಲಿ ಅಲಂಕಾರವಾಗಿರಬೇಕೆಂದು ಎಚ್ಚರಿಸು.

ಸಂದರ್ಭದೊಂದಿಗೆ ಓದಿ · ತೀತನಿಗೆ 2

8ಇದರಿಂದ ವಿರೋಧಪಕ್ಷ ದವನು ನಿಮ್ಮ ವಿಷಯದಲ್ಲಿ ಕೆಟ್ಟದ್ದು ಹೇಳುವದಕ್ಕೆ ಯಾವದೂ ಇಲ್ಲದೆ ನಾಚಿಕೆಪಡುವನು.

9ಸೇವಕರು ತಮ್ಮ ಸ್ವಂತ ಯಾಜಮಾನರಿಗೆ ವಿಧೇಯರಾಗಿದ್ದು ಎಲ್ಲವು ಗಳಲ್ಲಿ ಅವರನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡುತ್ತಾ ಎದುರು ಮಾತನ್ನಾಡದೆ

10ಯಾವದನ್ನೂ ಕದ್ದಿಟ್ಟು ಕೊಳ್ಳದೆ ಪೂರಾ ನಂಬಿಗಸ್ತರೆಂದು ತೋರಿಸಿಕೊಂಡು ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯ ಗಳಲ್ಲಿ ಅಲಂಕಾರವಾಗಿರಬೇಕೆಂದು ಎಚ್ಚರಿಸು.

11ಯಾಕಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟು ಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು.

12ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು ಈಗಿನ ಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕ ಬೇಕೆಂದು ಅದು (ಅ ಕೃಪೆಯು) ನಮಗೆ ಬೋಧಿಸು ತ್ತದೆ.

ತೀತನಿಗೆ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी