ತೀತನಿಗೆ 2:11

ಯಾಕಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟು ಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು.

ಸಂದರ್ಭದೊಂದಿಗೆ ಓದಿ · ತೀತನಿಗೆ 2

9ಸೇವಕರು ತಮ್ಮ ಸ್ವಂತ ಯಾಜಮಾನರಿಗೆ ವಿಧೇಯರಾಗಿದ್ದು ಎಲ್ಲವು ಗಳಲ್ಲಿ ಅವರನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡುತ್ತಾ ಎದುರು ಮಾತನ್ನಾಡದೆ

10ಯಾವದನ್ನೂ ಕದ್ದಿಟ್ಟು ಕೊಳ್ಳದೆ ಪೂರಾ ನಂಬಿಗಸ್ತರೆಂದು ತೋರಿಸಿಕೊಂಡು ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯ ಗಳಲ್ಲಿ ಅಲಂಕಾರವಾಗಿರಬೇಕೆಂದು ಎಚ್ಚರಿಸು.

11ಯಾಕಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟು ಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು.

12ನಾವು ಭಕ್ತಿಹೀನತೆಯನ್ನೂ ಲೋಕದ ಆಶೆಗಳನ್ನೂ ತೊರೆದು ಈಗಿನ ಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ ನೀತಿವಂತರಾಗಿಯೂ ಭಕ್ತಿಯುಳ್ಳವರಾಗಿಯೂ ಬದುಕ ಬೇಕೆಂದು ಅದು (ಅ ಕೃಪೆಯು) ನಮಗೆ ಬೋಧಿಸು ತ್ತದೆ.

13ನಾವು ಭಾಗ್ಯಕರವಾದ ನಿರೀಕ್ಷೆಯನ್ನೂ ಮಹತ್ತಾದ ದೇವರ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಪ್ರಭಾವದ ಪ್ರತ್ಯಕ್ಷತೆಯನ್ನೂ ಎದುರು ನೋಡುವವರಾಗಿದ್ದೇವೆ.

ತೀತನಿಗೆ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी