ಆಗ ಅವಳು ಏರಿ ಹೋಗಿ ಅವನನ್ನು ದೇವರ ಮನುಷ್ಯನ ಮಂಚದಮೇಲೆ ಮಲಗಿಸಿ ಅವನಿಗೋಸ್ಕರ ಬಾಗಲು ಹಾಕಿ ಹೊರಟು ತನ್ನ ಗಂಡನನ್ನು ಕರೆದು --
19ಆಗ ಅವನು ತನ್ನ ತಂದೆಗೆ--ನನ್ನ ತಲೆ, ನನ್ನ ತಲೆ ಅಂದನು. ತಂದೆಯು ಒಬ್ಬ ಹುಡುಗನಿಗೆ--ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋಗು ಅಂದನು.
20ಹುಡು ಗನು ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋದನು. ಅವನು ಮಧ್ಯಾಹ್ನದ ವರೆಗೂ ಅವಳ ತೊಡೆಯ ಮೇಲೆ ಇದ್ದುಕೊಂಡು ಸತ್ತುಹೋದನು.
21ಆಗ ಅವಳು ಏರಿ ಹೋಗಿ ಅವನನ್ನು ದೇವರ ಮನುಷ್ಯನ ಮಂಚದಮೇಲೆ ಮಲಗಿಸಿ ಅವನಿಗೋಸ್ಕರ ಬಾಗಲು ಹಾಕಿ ಹೊರಟು ತನ್ನ ಗಂಡನನ್ನು ಕರೆದು --
22ನಾನು ದೇವರ ಮನುಷ್ಯನ ಬಳಿಗೆ ಓಡಿಹೋಗಿ ತಿರುಗಿ ಬರುವ ಹಾಗೆ ನೀನು ದಯಮಾಡಿ ಯೌವನ ಸ್ಥರಲ್ಲಿ ಒಬ್ಬನನ್ನೂ ಕತ್ತೆಗಳಲ್ಲಿ ಒಂದನ್ನೂ ನನಗೆ ಕಳುಹಿಸು ಅಂದಳು.
23ಅದಕ್ಕೆ ಅವನು--ಇಂದು ಅಮಾವಾಸ್ಯೆ ಯಲ್ಲ, ಸಬ್ಬತ್ತೂ ಅಲ್ಲ; ಯಾಕೆ ನೀನು ಈ ಹೊತ್ತು ಅವನ ಬಳಿಗೆ ಹೋಗುತ್ತೀ ಅಂದನು. ಅದಕ್ಕವಳು --ಒಳ್ಳೇದಾಗಿರುವದು ಅಂದಳು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ