೨ ಅರಸುಗಳು 4:22

ನಾನು ದೇವರ ಮನುಷ್ಯನ ಬಳಿಗೆ ಓಡಿಹೋಗಿ ತಿರುಗಿ ಬರುವ ಹಾಗೆ ನೀನು ದಯಮಾಡಿ ಯೌವನ ಸ್ಥರಲ್ಲಿ ಒಬ್ಬನನ್ನೂ ಕತ್ತೆಗಳಲ್ಲಿ ಒಂದನ್ನೂ ನನಗೆ ಕಳುಹಿಸು ಅಂದಳು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 4

20ಹುಡು ಗನು ಅವನನ್ನು ಅವನ ತಾಯಿಯ ಬಳಿಗೆ ಎತ್ತಿಕೊಂಡು ಹೋದನು. ಅವನು ಮಧ್ಯಾಹ್ನದ ವರೆಗೂ ಅವಳ ತೊಡೆಯ ಮೇಲೆ ಇದ್ದುಕೊಂಡು ಸತ್ತುಹೋದನು.

21ಆಗ ಅವಳು ಏರಿ ಹೋಗಿ ಅವನನ್ನು ದೇವರ ಮನುಷ್ಯನ ಮಂಚದಮೇಲೆ ಮಲಗಿಸಿ ಅವನಿಗೋಸ್ಕರ ಬಾಗಲು ಹಾಕಿ ಹೊರಟು ತನ್ನ ಗಂಡನನ್ನು ಕರೆದು --

22ನಾನು ದೇವರ ಮನುಷ್ಯನ ಬಳಿಗೆ ಓಡಿಹೋಗಿ ತಿರುಗಿ ಬರುವ ಹಾಗೆ ನೀನು ದಯಮಾಡಿ ಯೌವನ ಸ್ಥರಲ್ಲಿ ಒಬ್ಬನನ್ನೂ ಕತ್ತೆಗಳಲ್ಲಿ ಒಂದನ್ನೂ ನನಗೆ ಕಳುಹಿಸು ಅಂದಳು.

23ಅದಕ್ಕೆ ಅವನು--ಇಂದು ಅಮಾವಾಸ್ಯೆ ಯಲ್ಲ, ಸಬ್ಬತ್ತೂ ಅಲ್ಲ; ಯಾಕೆ ನೀನು ಈ ಹೊತ್ತು ಅವನ ಬಳಿಗೆ ಹೋಗುತ್ತೀ ಅಂದನು. ಅದಕ್ಕವಳು --ಒಳ್ಳೇದಾಗಿರುವದು ಅಂದಳು.

24ಆಗ ಅವಳು ಕತ್ತೆಯ ಮೇಲೆ ತಡಿಯನ್ನು ಹಾಕಿಸಿ ತನ್ನ ಸೇವಕನಿಗೆ --ನಡಿಸಿಕೊಂಡು ಹೋಗು; ನಾನು ನಿನಗೆ ಹೇಳುವ ವರೆಗೂ ನನಗೋಸ್ಕರ ಸವಾರಿಯನ್ನು ತಡಮಾಡ ಬೇಡವೆಂದು ಹೇಳಿ ಕರ್ಮೆಲು ಬೆಟ್ಟದಲ್ಲಿರುವ ದೇವರ ಮನುಷ್ಯನ ಬಳಿಗೆ ಬಂದಳು.

೨ ಅರಸುಗಳು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी