೧ ಅರಸುಗಳು 4:32

ಅವನು ಮೂರು ಸಾವಿರ ಸಾಮತಿಗಳನ್ನು ಹೇಳಿದನು; ಅವನ ಹಾಡುಗಳು ಸಾವಿರದ ಐದು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 4

30ಸೊಲೊಮೋನನ ಜ್ಞಾನವು ಮೂಡಣ ದೇಶದ ಎಲ್ಲಾ ಜನರ ಜ್ಞಾನಕ್ಕಿಂತಲೂ ಐಗುಪ್ತದ ಎಲ್ಲಾ ಜನರ ಜ್ಞಾನಕ್ಕಿಂತಲೂ ಅಧಿಕವಾಗಿತ್ತು.

31ಎಜ್ರಾಹಿಯಾದ ಎತಾನನು, ಮಹೋಲನನ ಮಕ್ಕಳಾದ ಹೆಮಾನನು, ಕಲ್ಕೋಲನು, ದರ್ದಾವನು ಮೊದಲಾದ ಎಲ್ಲಾ ಜನ ರಿಗಿಂತ ಅವನು ಜ್ಞಾನಿಯಾಗಿದ್ದನು. ಸುತ್ತಲಿರುವ ಸಕಲ ಜನಾಂಗಗಳಲ್ಲಿ ಅವನ ಕೀರ್ತಿ ಇತ್ತು.

32ಅವನು ಮೂರು ಸಾವಿರ ಸಾಮತಿಗಳನ್ನು ಹೇಳಿದನು; ಅವನ ಹಾಡುಗಳು ಸಾವಿರದ ಐದು.

33ಅವನು ಮರಗಳನ್ನು ಕುರಿತು ಲೆಬನೋನಿನಲ್ಲಿರುವ ದೇವದಾರು ಮರ ಮೊದಲುಗೊಂಡು ಗೋಡೆಯ ಮೇಲೆ ಬೆಳೆಯುವ ಹಿಸ್ಸೋಪಿನ ವರೆಗೂ ಹೇಳಿದನು. ಇದಲ್ಲದೆ ಮೃಗ ಪಕ್ಷಿ ಕ್ರಿಮಿ ಮತ್ತು ವಿಾನುಗಳನ್ನು ಕುರಿತೂ ಹೇಳಿದನು.

34ಸೊಲೊಮೋನನ ಜ್ಞಾನವನ್ನು ಕುರಿತು ಕೇಳಿದ ಭೂಮಿಯ ಮೇಲಿರುವ ಸಮಸ್ತ ಅರಸರ ಬಳಿಯಿಂದ ಎಲ್ಲಾ ಜನಗಳು ಅವನ ಜ್ಞಾನವನ್ನು ಕೇಳಲು ಬಂದರು.

೧ ಅರಸುಗಳು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी