ಯೆಹೆಜ್ಕೇಲನು 40:33

ಅಲ್ಲಿನ ಚಿಕ್ಕ ಕೊಠಡಿಗಳನ್ನೂ ಕಂಬಗಳನ್ನೂ ಕಮಾನುಗಳನ್ನೂ ಈ ಅಳತೆಗಳ ಪ್ರಕಾರವೇ ಅವನು ಅಳೆದನು; ಅದರಲ್ಲಿ ಸಹ ಸುತ್ತಲೂ ಇರುವ ಅದರ ಕಮಾನುಗಳಲ್ಲಿಯೂ ಕಿಟಕಿಗಳು ಇದ್ದವು. ಅದರ ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 40

31ಅದರ ಕಮಾ ನುಗಳು ಹೊರಗಿನ ಅಂಗಳದ ಕಡೆಗಿದ್ದವು; ಅದರ ಕಂಬಗಳಲ್ಲಿ ಖರ್ಜೂರದ ಮರಗಳಿದ್ದವು. ಅದಕ್ಕೆ ಏರುವದಕ್ಕೆ ಎಂಟು ಮೆಟ್ಟಲುಗಳು ಇದ್ದವು.

32ಅವನು ನನ್ನನ್ನು ಪೂರ್ವದ ಕಡೆಗಿರುವ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಬಾಗಲನ್ನು ಅಳೆದನು.

33ಅಲ್ಲಿನ ಚಿಕ್ಕ ಕೊಠಡಿಗಳನ್ನೂ ಕಂಬಗಳನ್ನೂ ಕಮಾನುಗಳನ್ನೂ ಈ ಅಳತೆಗಳ ಪ್ರಕಾರವೇ ಅವನು ಅಳೆದನು; ಅದರಲ್ಲಿ ಸಹ ಸುತ್ತಲೂ ಇರುವ ಅದರ ಕಮಾನುಗಳಲ್ಲಿಯೂ ಕಿಟಕಿಗಳು ಇದ್ದವು. ಅದರ ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ.

34ಅದರ ಕಮಾನುಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಖರ್ಜೂರದ ಮರಗಳು ಆ ಕಡೆ ಈ ಕಡೆ ಅಲ್ಲಿನ ಕಂಬಗಳ ಮೇಲೆ ಇದ್ದವು; ಮೇಲೆ ಹೋಗುವದಕ್ಕೆ ಅದಕ್ಕೆ ಎಂಟು ಮೆಟ್ಟಲುಗಳು ಇದ್ದವು.

35ಇದಲ್ಲದೆ ಅವನು ನನ್ನನ್ನು ಉತ್ತರದ ಬಾಗಲಿನ ಬಳಿಗೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಅಳೆದನು;

ಯೆಹೆಜ್ಕೇಲನು 40 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी