ಇದಲ್ಲದೆ ಅವನು ನನ್ನನ್ನು ಉತ್ತರದ ಬಾಗಲಿನ ಬಳಿಗೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಅಳೆದನು;
33ಅಲ್ಲಿನ ಚಿಕ್ಕ ಕೊಠಡಿಗಳನ್ನೂ ಕಂಬಗಳನ್ನೂ ಕಮಾನುಗಳನ್ನೂ ಈ ಅಳತೆಗಳ ಪ್ರಕಾರವೇ ಅವನು ಅಳೆದನು; ಅದರಲ್ಲಿ ಸಹ ಸುತ್ತಲೂ ಇರುವ ಅದರ ಕಮಾನುಗಳಲ್ಲಿಯೂ ಕಿಟಕಿಗಳು ಇದ್ದವು. ಅದರ ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ.
34ಅದರ ಕಮಾನುಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಖರ್ಜೂರದ ಮರಗಳು ಆ ಕಡೆ ಈ ಕಡೆ ಅಲ್ಲಿನ ಕಂಬಗಳ ಮೇಲೆ ಇದ್ದವು; ಮೇಲೆ ಹೋಗುವದಕ್ಕೆ ಅದಕ್ಕೆ ಎಂಟು ಮೆಟ್ಟಲುಗಳು ಇದ್ದವು.
35ಇದಲ್ಲದೆ ಅವನು ನನ್ನನ್ನು ಉತ್ತರದ ಬಾಗಲಿನ ಬಳಿಗೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಅಳೆದನು;
36ಅಲ್ಲಿನ ಚಿಕ್ಕ ಕೋಣೆಗಳು, ಕಂಬಗಳು ಕಮಾನುಗಳು ಮತ್ತು ಅದರ ಸುತ್ತಲೂ ಇರುವ ಕಿಟಕಿಗಳ ಉದ್ದವು ಐವತ್ತು ಮೊಳ, ಅಗಲವು ಇಪ್ಪತ್ತೈದು ಮೊಳ;
37ಅದರ ಕಂಬಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಖರ್ಜೂರದ ಮರಗಳಿದ್ದವು; ಅದರ ಮೇಲೆ ಹೋಗುವ ಹಾಗೆ ಎಂಟು ಮೆಟ್ಟಲುಗಳು ಇದ್ದವು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ