ಯೆಹೆಜ್ಕೇಲನು 43:19

ದೇವರಾದ ಕರ್ತನು ಹೇಳುವದೇನಂದರೆ--ನನಗೆ ಸೇವೆಮಾಡುವದಕ್ಕಾಗಿ ನನ್ನ ಬಳಿಗೆ ಸವಿಾಪಿಸುವ ಚಾದೋಕನ ವಂಶದವರಾದ ಯಾಜಕರಿಗೂ ಲೇವಿಯವರಿಗೂ ಪಾಪದ ಬಲಿಗಾಗಿ ಎಳೇ ಹೊರಿಯನ್ನು ಕೊಡಬೇಕು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 43

17ಅದರ ಅಂಚು ನಾಲ್ಕೂ ಕಡೆಗೆ ಹದಿನಾಲ್ಕು ಮೊಳ ಉದ್ದವಾಗಿಯೂ; ಹದಿ ನಾಲ್ಕು ಮೊಳ ಅಗಲವಾಗಿಯೂ ಅದರ ಸುತ್ತಲಿರುವ ಮೇರೆಯು ಅರ್ಧ ಮೊಳವಾಗಿಯೂ ತಳವು ಒಂದು ಮೊಳವಾಗಿಯೂ ಇರಬೇಕು; ಮೆಟ್ಟಲುಗಳು ಪೂರ್ವ ದಿಕ್ಕಿಗೆ ಎದುರಾಗಿರಬೇಕು.

18ಅವನು ನನಗೆ ಹೇಳಿದ್ದೇನಂದರೆ--ಮನುಷ್ಯ ಪುತ್ರನೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಯಜ್ಞವೇದಿಯನ್ನು ಮಾಡುವ ದಿನದಲ್ಲಿ ಅದರ ಮೇಲೆ ದಹನಬಲಿಗಳನ್ನು ಅರ್ಪಿಸಿ ರಕ್ತವನ್ನು ಚಿಮುಕಿಸಬೇಕು; ಇವು ಅಲ್ಲಿನ ನಿಯಮಗಳಾಗಿವೆ.

19ದೇವರಾದ ಕರ್ತನು ಹೇಳುವದೇನಂದರೆ--ನನಗೆ ಸೇವೆಮಾಡುವದಕ್ಕಾಗಿ ನನ್ನ ಬಳಿಗೆ ಸವಿಾಪಿಸುವ ಚಾದೋಕನ ವಂಶದವರಾದ ಯಾಜಕರಿಗೂ ಲೇವಿಯವರಿಗೂ ಪಾಪದ ಬಲಿಗಾಗಿ ಎಳೇ ಹೊರಿಯನ್ನು ಕೊಡಬೇಕು.

20ಅದರ ರಕ್ತವನ್ನು ತೆಗೆದುಕೊಂಡು ಅದರ ನಾಲ್ಕು ಕೊಂಬುಗಳ ಅಂಚಿನ ನಾಲ್ಕು ಮೂಲೆಗಳಿಗೂ ಸುತ್ತಲೂ ಹಚ್ಚಿ ಶುದ್ಧಪಡಿಸಿ ದೋಷ ಪರಿಹರಿಸಬೇಕು.

21ಇದಲ್ಲದೆ ನೀನು ಹೋರಿ ಯನ್ನು ಸಹ ಪಾಪದ ಅರ್ಪಣೆಗೆ ತೆಗೆದುಕೊಂಡು ಆಲಯದ ನೇಮಕವಾದ ಪರಿಶುದ್ಧ ಸ್ಥಳದಲ್ಲಿ ಹೊರಗೆ ಸುಡಬೇಕು.

ಯೆಹೆಜ್ಕೇಲನು 43 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी