ಯೆಹೆಜ್ಕೇಲನು 43:17

ಅದರ ಅಂಚು ನಾಲ್ಕೂ ಕಡೆಗೆ ಹದಿನಾಲ್ಕು ಮೊಳ ಉದ್ದವಾಗಿಯೂ; ಹದಿ ನಾಲ್ಕು ಮೊಳ ಅಗಲವಾಗಿಯೂ ಅದರ ಸುತ್ತಲಿರುವ ಮೇರೆಯು ಅರ್ಧ ಮೊಳವಾಗಿಯೂ ತಳವು ಒಂದು ಮೊಳವಾಗಿಯೂ ಇರಬೇಕು; ಮೆಟ್ಟಲುಗಳು ಪೂರ್ವ ದಿಕ್ಕಿಗೆ ಎದುರಾಗಿರಬೇಕು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 43

15ಈ ಪ್ರಕಾರ ಯಜ್ಞವೇದಿಯು ನಾಲ್ಕು ಮೊಳವಾಗಿಯೂ; ಯಜ್ಞವೇದಿಯಿಂದ ಮೇಲಕ್ಕೆ ನಾಲ್ಕು ಕೊಂಬುಗಳುಳ್ಳದ್ದಾಗಿಯೂ ಇರ ಬೇಕು.

16ಯಜ್ಞವೇದಿಯ ಉದ್ದವು ಹನ್ನೆರಡು ಮೊಳ, ಅಗಲ ಹನ್ನೆರಡು ಮೊಳ ನಾಲ್ಕು ಕಡೆಯ ಚೌಕಗಳು ಚಚ್ಚೌಕವಾಗಿರಬೇಕು.

17ಅದರ ಅಂಚು ನಾಲ್ಕೂ ಕಡೆಗೆ ಹದಿನಾಲ್ಕು ಮೊಳ ಉದ್ದವಾಗಿಯೂ; ಹದಿ ನಾಲ್ಕು ಮೊಳ ಅಗಲವಾಗಿಯೂ ಅದರ ಸುತ್ತಲಿರುವ ಮೇರೆಯು ಅರ್ಧ ಮೊಳವಾಗಿಯೂ ತಳವು ಒಂದು ಮೊಳವಾಗಿಯೂ ಇರಬೇಕು; ಮೆಟ್ಟಲುಗಳು ಪೂರ್ವ ದಿಕ್ಕಿಗೆ ಎದುರಾಗಿರಬೇಕು.

18ಅವನು ನನಗೆ ಹೇಳಿದ್ದೇನಂದರೆ--ಮನುಷ್ಯ ಪುತ್ರನೇ, ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಯಜ್ಞವೇದಿಯನ್ನು ಮಾಡುವ ದಿನದಲ್ಲಿ ಅದರ ಮೇಲೆ ದಹನಬಲಿಗಳನ್ನು ಅರ್ಪಿಸಿ ರಕ್ತವನ್ನು ಚಿಮುಕಿಸಬೇಕು; ಇವು ಅಲ್ಲಿನ ನಿಯಮಗಳಾಗಿವೆ.

19ದೇವರಾದ ಕರ್ತನು ಹೇಳುವದೇನಂದರೆ--ನನಗೆ ಸೇವೆಮಾಡುವದಕ್ಕಾಗಿ ನನ್ನ ಬಳಿಗೆ ಸವಿಾಪಿಸುವ ಚಾದೋಕನ ವಂಶದವರಾದ ಯಾಜಕರಿಗೂ ಲೇವಿಯವರಿಗೂ ಪಾಪದ ಬಲಿಗಾಗಿ ಎಳೇ ಹೊರಿಯನ್ನು ಕೊಡಬೇಕು.

ಯೆಹೆಜ್ಕೇಲನು 43 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी