೨ ಕೊರಿಂಥದವರಿಗೆ 9:6

ಆದರೆ--ಸ್ವಲ್ಪವಾಗಿ ಬಿತ್ತುವವನು (ಪೈರನ್ನು) ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿಯೇ ಕೊಯ್ಯುವನು ಎಂದು ನಾನು ಹೇಳು ತ್ತೇನೆ.

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 9

4ಸಿದ್ಧವಾಗಿರದಿದ್ದರೆ ಒಂದು ವೇಳೆ ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಸಂಗಡ ಬಂದು ನೀವು ಸಿದ್ಧವಾಗಲಿಲ್ಲವೆಂಬದನ್ನು ಕಾಣುವಾಗ ನಮಗೆ ಇಂಥ ಭರವಸವಿದ್ದದ್ದಕ್ಕೆ ನಾವು ನಾಚಿಕೆಪಡಬೇಕಾದೀತು;

5ಹೀಗಿರಲಾಗಿ ನೀವು ಕೊಡುತ್ತೇವೆಂದು ಮೊದಲು ಹೇಳಿದ ಔದಾರ್ಯ ದ್ರವ್ಯವನ್ನು ಸಿದ್ಧಪಡಿಸಬೇಕೆಂದು ಈ ಸಹೋದರರು ಮುಂದಾಗಿ ನಿಮ್ಮ ಬಳಿಗೆ ಬಂದು ಅವರನ್ನು ಪ್ರೋತ್ಸಾಹಿಸುವದು ಅವಶ್ಯವೆಂದು ನನಗೆ ತೋಚಿತು, ಹೀಗೆ ಅದು ಸಂಕೋಚದಿಂದ ಬಾರದೆ ಔದಾರ್ಯವಾಗಿಯೇ ಸಿದ್ಧವಾಗುವದು.

6ಆದರೆ--ಸ್ವಲ್ಪವಾಗಿ ಬಿತ್ತುವವನು (ಪೈರನ್ನು) ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿಯೇ ಕೊಯ್ಯುವನು ಎಂದು ನಾನು ಹೇಳು ತ್ತೇನೆ.

7ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿ ಮಾಡುತ್ತಾನೆ.

8ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾ ಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆ ಯುಳ್ಳವರಾಗಿ ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರುವಿರಿ.

೨ ಕೊರಿಂಥದವರಿಗೆ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी