೨ ಕೊರಿಂಥದವರಿಗೆ 9:4

ಸಿದ್ಧವಾಗಿರದಿದ್ದರೆ ಒಂದು ವೇಳೆ ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಸಂಗಡ ಬಂದು ನೀವು ಸಿದ್ಧವಾಗಲಿಲ್ಲವೆಂಬದನ್ನು ಕಾಣುವಾಗ ನಮಗೆ ಇಂಥ ಭರವಸವಿದ್ದದ್ದಕ್ಕೆ ನಾವು ನಾಚಿಕೆಪಡಬೇಕಾದೀತು;

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 9

2ನಿಮ್ಮ ಮನಸ್ಸು ಸಿದ್ದವಾಗಿದೆ ಎಂಬದು ನನಗೆ ಗೊತ್ತುಂಟು; ಒಂದು ವರುಷದ ಹಿಂದೆ ಅಕಾಯದವರು ಸಹಾಯಮಾಡುವದಕ್ಕೆ ಸಿದ್ಧವಾಗಿ ದ್ದರೆಂದು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳುತ್ತಾ ಇದ್ದೇನೆ; ನಿಮ್ಮ ಆಸಕ್ತಿಯು ಬಹು ಜನರನ್ನು ಪ್ರೇರೇಪಿಸಿತು.

3ಆದರೂ ನಾವು ನಿಮ್ಮನ್ನು ಹೊಗಳಿದ್ದು ವ್ಯರ್ಥವಾಗದೆ ನಾನು ಹೇಳಿದ ಪ್ರಕಾರವೇ ನೀವು ಸಿದ್ಧವಾಗಿರಬೇಕೆಂದು ಆ ಸಹೋದರರನ್ನು ಕಳುಹಿಸಿದ್ದೇನೆ.

4ಸಿದ್ಧವಾಗಿರದಿದ್ದರೆ ಒಂದು ವೇಳೆ ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಸಂಗಡ ಬಂದು ನೀವು ಸಿದ್ಧವಾಗಲಿಲ್ಲವೆಂಬದನ್ನು ಕಾಣುವಾಗ ನಮಗೆ ಇಂಥ ಭರವಸವಿದ್ದದ್ದಕ್ಕೆ ನಾವು ನಾಚಿಕೆಪಡಬೇಕಾದೀತು;

5ಹೀಗಿರಲಾಗಿ ನೀವು ಕೊಡುತ್ತೇವೆಂದು ಮೊದಲು ಹೇಳಿದ ಔದಾರ್ಯ ದ್ರವ್ಯವನ್ನು ಸಿದ್ಧಪಡಿಸಬೇಕೆಂದು ಈ ಸಹೋದರರು ಮುಂದಾಗಿ ನಿಮ್ಮ ಬಳಿಗೆ ಬಂದು ಅವರನ್ನು ಪ್ರೋತ್ಸಾಹಿಸುವದು ಅವಶ್ಯವೆಂದು ನನಗೆ ತೋಚಿತು, ಹೀಗೆ ಅದು ಸಂಕೋಚದಿಂದ ಬಾರದೆ ಔದಾರ್ಯವಾಗಿಯೇ ಸಿದ್ಧವಾಗುವದು.

6ಆದರೆ--ಸ್ವಲ್ಪವಾಗಿ ಬಿತ್ತುವವನು (ಪೈರನ್ನು) ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿಯೇ ಕೊಯ್ಯುವನು ಎಂದು ನಾನು ಹೇಳು ತ್ತೇನೆ.

೨ ಕೊರಿಂಥದವರಿಗೆ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी