ಆದಿಕಾಂಡ 19:32

ಆದದರಿಂದ ನಾವು ನಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ ನಾವು ಅವನ ಸಂಗಡ ಮಲಗಿಕೊಳ್ಳೋಣ ಬಾ. ಯಾಕಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು ಅಂದಳು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 19

30ಲೋಟನು ಚೋಗರಿನಿಂದ ಏರಿಹೋಗಿ ತನ್ನ ಇಬ್ಬರು ಕುಮಾರ್ತೆಯರ ಸಂಗಡ ಬೆಟ್ಟದಲ್ಲಿ ವಾಸ ಮಾಡಿದನು; ಯಾಕಂದರೆ ಚೋಗರದಲ್ಲಿ ವಾಸಿಸು ವದಕ್ಕೆ ಅವನು ಭಯಪಟ್ಟನು. ಅಲ್ಲಿ ಅವನೂ ಅವನ ಇಬ್ಬರು ಕುಮಾರ್ತೆಯರೂ ಒಂದು ಗವಿಯಲ್ಲಿ ವಾಸವಾಗಿದ್ದರು.

31ಆಗ ಮೊದಲು ಹುಟ್ಟಿದವಳು ಚಿಕ್ಕವಳಿಗೆ--ನಮ್ಮ ತಂದೆಯು ಮುದುಕನಾಗಿದ್ದಾನೆ. ಲೋಕದ ಎಲ್ಲಾ ಕ್ರಮದ ಪ್ರಕಾರ ನಮ್ಮಲ್ಲಿ ಬರುವ ಹಾಗೆ ಪುರುಷನು ಭೂಮಿಯಲ್ಲಿ ಯಾರೂ ಇಲ್ಲ.

32ಆದದರಿಂದ ನಾವು ನಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ ನಾವು ಅವನ ಸಂಗಡ ಮಲಗಿಕೊಳ್ಳೋಣ ಬಾ. ಯಾಕಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು ಅಂದಳು.

33ಆ ರಾತ್ರಿಯಲ್ಲಿ ಅವರು ತಮ್ಮ ತಂದೆಗೆ ದ್ರಾಕ್ಷಾ ರಸವನ್ನು ಕುಡಿಸಿದರು. ಆಗ ಮೊದಲು ಹುಟ್ಟಿದವಳು ಬಂದು ತನ್ನ ತಂದೆಯ ಸಂಗಡ ಮಲಗಿಕೊಂಡಳು. ಅವಳು ಮಲಗಿಕೊಳ್ಳುವಾಗಲೂ ಏಳುವಾಗಲೂ ಅವನಿಗೆ ತಿಳಿಯಲಿಲ್ಲ.

34ಮರುದಿನ ಮೊದಲು ಹುಟ್ಟಿದವಳು ಚಿಕ್ಕವಳಿಗೆ--ಇಗೋ, ಕಳೆದ ರಾತ್ರಿ ನನ್ನ ತಂದೆಯ ಸಂಗಡ ನಾನು ಮಲಗಿಕೊಂಡೆನು; ಈ ರಾತ್ರಿಯಲ್ಲಿಯೂ ಅವನಿಗೆ ದ್ರಾಕ್ಷಾರಸವನ್ನು ಕುಡಿಸಿ ನೀನು ಹೋಗಿ ಅವನ ಸಂಗಡ ಮಲಗಿಕೋ; ಯಾಕಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು ಅಂದಳು.

ಆದಿಕಾಂಡ 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी