ಆದಿಕಾಂಡ 19:30

ಲೋಟನು ಚೋಗರಿನಿಂದ ಏರಿಹೋಗಿ ತನ್ನ ಇಬ್ಬರು ಕುಮಾರ್ತೆಯರ ಸಂಗಡ ಬೆಟ್ಟದಲ್ಲಿ ವಾಸ ಮಾಡಿದನು; ಯಾಕಂದರೆ ಚೋಗರದಲ್ಲಿ ವಾಸಿಸು ವದಕ್ಕೆ ಅವನು ಭಯಪಟ್ಟನು. ಅಲ್ಲಿ ಅವನೂ ಅವನ ಇಬ್ಬರು ಕುಮಾರ್ತೆಯರೂ ಒಂದು ಗವಿಯಲ್ಲಿ ವಾಸವಾಗಿದ್ದರು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 19

28ಸೊದೋಮ್‌ ಗೊಮೋರಗಳ ಕಡೆಗೂ ಮೈದಾನದ ಎಲ್ಲಾ ಪ್ರದೇಶ ಗಳ ಕಡೆಗೂ ನೋಡಿದನು. ಆಗ ಇಗೋ, ಆ ದೇಶದ ಹೊಗೆಯು ಆವಿಗೆಯ ಹೊಗೆಯ ಹಾಗೆ ಏರಿತು.

29ದೇವರು ಮೈದಾನದ ಪಟ್ಟಣಗಳನ್ನು ನಾಶಮಾಡುವಾಗ ಆದದ್ದೇನಂದರೆ, ದೇವರು ಅಬ್ರ ಹಾಮನನ್ನು ಜ್ಞಾಪಕಮಾಡಿಕೊಂಡು ಲೋಟನು ವಾಸಮಾಡಿದ ಪಟ್ಟಣಗಳನ್ನು ಹಾಳುಮಾಡಿದಾಗ ಹಾಳಾದ ಆ ಸ್ಥಳದೊಳಗಿಂದ ಲೋಟನನ್ನು ಹೊರಗೆ ಕಳುಹಿಸಿದನು.

30ಲೋಟನು ಚೋಗರಿನಿಂದ ಏರಿಹೋಗಿ ತನ್ನ ಇಬ್ಬರು ಕುಮಾರ್ತೆಯರ ಸಂಗಡ ಬೆಟ್ಟದಲ್ಲಿ ವಾಸ ಮಾಡಿದನು; ಯಾಕಂದರೆ ಚೋಗರದಲ್ಲಿ ವಾಸಿಸು ವದಕ್ಕೆ ಅವನು ಭಯಪಟ್ಟನು. ಅಲ್ಲಿ ಅವನೂ ಅವನ ಇಬ್ಬರು ಕುಮಾರ್ತೆಯರೂ ಒಂದು ಗವಿಯಲ್ಲಿ ವಾಸವಾಗಿದ್ದರು.

31ಆಗ ಮೊದಲು ಹುಟ್ಟಿದವಳು ಚಿಕ್ಕವಳಿಗೆ--ನಮ್ಮ ತಂದೆಯು ಮುದುಕನಾಗಿದ್ದಾನೆ. ಲೋಕದ ಎಲ್ಲಾ ಕ್ರಮದ ಪ್ರಕಾರ ನಮ್ಮಲ್ಲಿ ಬರುವ ಹಾಗೆ ಪುರುಷನು ಭೂಮಿಯಲ್ಲಿ ಯಾರೂ ಇಲ್ಲ.

32ಆದದರಿಂದ ನಾವು ನಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ ನಾವು ಅವನ ಸಂಗಡ ಮಲಗಿಕೊಳ್ಳೋಣ ಬಾ. ಯಾಕಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು ಅಂದಳು.

ಆದಿಕಾಂಡ 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी