ಆಗ ಬುಗ್ಗೆಯ ಬಾಗಲಿಗೂ ಅರಸನ ಕೊಳಕ್ಕೂ ಹಾದು ಬಂದೆನು. ಆದರೆ ನಾನು ಹತ್ತಿದ ಪಶುವು ಹೋಗುವದಕ್ಕೆ ಸ್ಥಳವಿಲ್ಲದೆ ಇತ್ತು.
12ಆದರೆ ಯೆರೂಸಲೇಮಿಗೋಸ್ಕರ ಮಾಡಲು ನನ್ನ ದೇವರು ನನ್ನ ಹೃದಯದಲ್ಲಿ ಇಟ್ಟದ್ದನ್ನು ಯಾರಿಗೂ ತಿಳಿಸದೆ ಇದ್ದೆನು; ನಾನು ಹತ್ತಿಕೊಂಡಿದ್ದ ಪಶುವಿನ ಹೊರತು ಮತ್ತೊಂದು ಪಶುವು ನನ್ನ ಸಂಗಡ ಇರಲಿಲ್ಲ.
13ನಾನು ರಾತ್ರಿಯಲ್ಲಿ ತಗ್ಗಿನ ಬಾಗಲಿನಿಂದ ಹೊರಟು ಸರ್ಪದ ಬಾವಿಯನ್ನು ದಾಟಿ ತಿಪ್ಪೆದಿಬ್ಬೆಯ ಬಾಗಲಿಗೆ ಬಂದು ಕೆಡವಿ ಹಾಕಲ್ಪಟ್ಟ ಯೆರೂಸಲೇಮಿನ ಗೋಡೆಗಳನ್ನೂ ಬೆಂಕಿಯಿಂದ ಸುಡಲ್ಪಟ್ಟ ಅದರ ಬಾಗಲುಗಳನ್ನು ಚೆನ್ನಾಗಿ ನೋಡಿದೆನು.
14ಆಗ ಬುಗ್ಗೆಯ ಬಾಗಲಿಗೂ ಅರಸನ ಕೊಳಕ್ಕೂ ಹಾದು ಬಂದೆನು. ಆದರೆ ನಾನು ಹತ್ತಿದ ಪಶುವು ಹೋಗುವದಕ್ಕೆ ಸ್ಥಳವಿಲ್ಲದೆ ಇತ್ತು.
15ಆ ರಾತ್ರಿಯಲ್ಲಿ ನಾನು ಹಳ್ಳದ ಮಾರ್ಗವಾಗಿ ಹೋಗಿ ಗೋಡೆಯನ್ನು ಚೆನ್ನಾಗಿ ನೋಡಿ ತಿರುಗಿಕೊಂಡು ತಗ್ಗಿನ ಬಾಗಲಿಂದ ಪ್ರವೇಶಿಸಿ ತಿರಿಗಿ ಬಂದೆನು.
16ನಾನು ಎಲ್ಲಿ ಹೋದೆನೆಂದೂ ಏನು ಮಾಡಿದೆ ನೆಂದೂ ಅಧಿಕಾರಸ್ಥರು ತಿಳಿಯದೆ ಇದ್ದರು. ಆ ವರೆಗೆ ನಾನು ಯೆಹೂದ್ಯರಿಗಾದರೂ ಯಾಜಕರಿಗಾದರೂ ಹಿರಿಯರಿಗಾದರೂ ಅಧಿಕಾರಸ್ಥರಿಗಾದರೂ ಕೆಲಸ ಮಾಡುವ ಇತರ ಜನರಿಗಾದರೂ ತಿಳಿಸಿದ್ದಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ