ನೆಹೆಮಿಯ 2:12

ಆದರೆ ಯೆರೂಸಲೇಮಿಗೋಸ್ಕರ ಮಾಡಲು ನನ್ನ ದೇವರು ನನ್ನ ಹೃದಯದಲ್ಲಿ ಇಟ್ಟದ್ದನ್ನು ಯಾರಿಗೂ ತಿಳಿಸದೆ ಇದ್ದೆನು; ನಾನು ಹತ್ತಿಕೊಂಡಿದ್ದ ಪಶುವಿನ ಹೊರತು ಮತ್ತೊಂದು ಪಶುವು ನನ್ನ ಸಂಗಡ ಇರಲಿಲ್ಲ.

ಸಂದರ್ಭದೊಂದಿಗೆ ಓದಿ · ನೆಹೆಮಿಯ 2

10ಹೊರೋನ್ಯನಾದ ಸನ್ಬಲ್ಲಟನೂ ಅಮ್ಮೋನ್ಯ ನಾಗಿರುವ ದಾಸನಾದ ಟೋಬೀಯನೂ ಕೇಳಿದಾಗ ಇಸ್ರಾಯೇಲ್‌ ಮಕ್ಕಳ ಮೇಲನ್ನು ಹುಡುಕಲು ಒಬ್ಬ ಮನುಷ್ಯನು ಬಂದದ್ದರಿಂದ ಅವರು ಬಹಳವಾಗಿ ವ್ಯಸನಪಟ್ಟರು.

11ನಾನು ಯೆರೂಸಲೇಮಿಗೆ ಬಂದು ಅಲ್ಲಿ ಮೂರು ದಿವಸ ಇದ್ದ ತರುವಾಯ ನಾನೂ ನನ್ನ ಸಂಗಡ ಇರುವ ಕೆಲವರೂ ರಾತ್ರಿಯಲ್ಲಿ ಎದ್ದೆವು.

12ಆದರೆ ಯೆರೂಸಲೇಮಿಗೋಸ್ಕರ ಮಾಡಲು ನನ್ನ ದೇವರು ನನ್ನ ಹೃದಯದಲ್ಲಿ ಇಟ್ಟದ್ದನ್ನು ಯಾರಿಗೂ ತಿಳಿಸದೆ ಇದ್ದೆನು; ನಾನು ಹತ್ತಿಕೊಂಡಿದ್ದ ಪಶುವಿನ ಹೊರತು ಮತ್ತೊಂದು ಪಶುವು ನನ್ನ ಸಂಗಡ ಇರಲಿಲ್ಲ.

13ನಾನು ರಾತ್ರಿಯಲ್ಲಿ ತಗ್ಗಿನ ಬಾಗಲಿನಿಂದ ಹೊರಟು ಸರ್ಪದ ಬಾವಿಯನ್ನು ದಾಟಿ ತಿಪ್ಪೆದಿಬ್ಬೆಯ ಬಾಗಲಿಗೆ ಬಂದು ಕೆಡವಿ ಹಾಕಲ್ಪಟ್ಟ ಯೆರೂಸಲೇಮಿನ ಗೋಡೆಗಳನ್ನೂ ಬೆಂಕಿಯಿಂದ ಸುಡಲ್ಪಟ್ಟ ಅದರ ಬಾಗಲುಗಳನ್ನು ಚೆನ್ನಾಗಿ ನೋಡಿದೆನು.

14ಆಗ ಬುಗ್ಗೆಯ ಬಾಗಲಿಗೂ ಅರಸನ ಕೊಳಕ್ಕೂ ಹಾದು ಬಂದೆನು. ಆದರೆ ನಾನು ಹತ್ತಿದ ಪಶುವು ಹೋಗುವದಕ್ಕೆ ಸ್ಥಳವಿಲ್ಲದೆ ಇತ್ತು.

ನೆಹೆಮಿಯ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी