ಯೆಹೋಶುವ 10:5

ಹಾಗೆಯೇ ಅಮೋರಿ ಯರ ಅರಸುಗಳಾದ ಯೆರೂಸಲೇಮಿನ ಅರಸನೂ ಹೆಬ್ರೋನಿನ ಅರಸನೂ ಯರ್ಮೂತಿನ ಅರಸನೂ ಲಾಕೀಷಿನ ಅರಸನೂ ಎಗ್ಲೋನಿನ ಅರಸನೂ ಈ ಐದು ಮಂದಿ ಅರಸುಗಳು ಕೂಡಿಕೊಂಡು ಅವರೂ ಅವರ ಸೈನ್ಯವೂ ಹೊರಟುಹೋಗಿ ಗಿಬ್ಬೋನಿನ ಮುಂದೆ ಪಾಳೆಯ ಮಾಡಿಕೊಂಡು ಅದರ ಮೇಲೆ ಯುದ್ಧಮಾಡಿ ದರು.

ಸಂದರ್ಭದೊಂದಿಗೆ ಓದಿ · ಯೆಹೋಶುವ 10

3ಆದದರಿಂದ ಯೆರೂಸಲೇಮಿನ ಅರಸನಾದ ಅದೋನೀಚೆದೆಕನು ಹೆಬ್ರೋನಿನ ಅರಸನಾದ ಹೋಹಾಮನಿಗೂ ಯರ್ಮೂತಿನ ಅರಸನಾದ ಪಿರಾಮನಿಗೂ ಲಾಕೀಷಿನ ಅರಸನಾದ ಯಾಫೀಯ ನಿಗೂ ಎಗ್ಲೋನಿನ ಅರಸನಾದ ದೆಬೀರನಿಗೂ ಹೇಳಿ ಕಳುಹಿಸಿದ್ದೇನಂದರೆ--

4ಗಿಬ್ಯೋನು ಯೆಹೋಶುವನ ಸಂಗಡವೂ ಇಸ್ರಾಯೇಲ್‌ ಮಕ್ಕಳ ಸಂಗಡವೂ ಸಮಾಧಾನಮಾಡಿಕೊಂಡದ್ದರಿಂದ ನಾವು ಅದನ್ನು ಹೊಡೆಯುವಂತೆ ನೀವು ನನ್ನ ಬಳಿಗೆ ಬಂದು ನನಗೆ ಸಹಾಯಮಾಡಿರಿ ಅಂದನು.

5ಹಾಗೆಯೇ ಅಮೋರಿ ಯರ ಅರಸುಗಳಾದ ಯೆರೂಸಲೇಮಿನ ಅರಸನೂ ಹೆಬ್ರೋನಿನ ಅರಸನೂ ಯರ್ಮೂತಿನ ಅರಸನೂ ಲಾಕೀಷಿನ ಅರಸನೂ ಎಗ್ಲೋನಿನ ಅರಸನೂ ಈ ಐದು ಮಂದಿ ಅರಸುಗಳು ಕೂಡಿಕೊಂಡು ಅವರೂ ಅವರ ಸೈನ್ಯವೂ ಹೊರಟುಹೋಗಿ ಗಿಬ್ಬೋನಿನ ಮುಂದೆ ಪಾಳೆಯ ಮಾಡಿಕೊಂಡು ಅದರ ಮೇಲೆ ಯುದ್ಧಮಾಡಿ ದರು.

6ಆಗ ಗಿಬ್ಯೋನಿನ ಜನರು--ಪರ್ವತಗಳಲ್ಲಿ ವಾಸವಾಗಿರುವ ಅಮೋರಿಯರ ಅರಸುಗಳೆಲ್ಲರೂ ನಮಗೆ ವಿರೋಧವಾಗಿ ಕೂಡಿದ್ದರಿಂದ ನಿನ್ನ ಸೇವಕರನ್ನು ಕೈಬಿಡದೆ ಶೀಘ್ರವಾಗಿ ನಮ್ಮ ಬಳಿಗೆ ಬಂದು ನಮ್ಮನ್ನು ರಕ್ಷಿಸಿ ಸಹಾಯಮಾಡು ಎಂದು ಗಿಲ್ಗಾಲಿನಲ್ಲಿ ಪಾಳೆಯ ಮಾಡಿಕೊಂಡಿದ್ದ ಯೆಹೋಶುವನ ಬಳಿಗೆ ಹೇಳಿ ಕಳುಹಿಸಿದರು.

7ಆಗ ಯೆಹೋಶುವನು ಗಿಲ್ಗಾಲನ್ನು ಬಿಟ್ಟು ತಾನೂ ತನ್ನ ಸಂಗಡ ಸಮಸ್ತಯುದ್ಧದ ಜನರೂ ಸಮಸ್ತ ಪರಾಕ್ರಮಶಾಲಿಗಳೂ ಏರಿಹೋದರು.

ಯೆಹೋಶುವ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी