ಯೆಹೋಶುವ 10:3

ಆದದರಿಂದ ಯೆರೂಸಲೇಮಿನ ಅರಸನಾದ ಅದೋನೀಚೆದೆಕನು ಹೆಬ್ರೋನಿನ ಅರಸನಾದ ಹೋಹಾಮನಿಗೂ ಯರ್ಮೂತಿನ ಅರಸನಾದ ಪಿರಾಮನಿಗೂ ಲಾಕೀಷಿನ ಅರಸನಾದ ಯಾಫೀಯ ನಿಗೂ ಎಗ್ಲೋನಿನ ಅರಸನಾದ ದೆಬೀರನಿಗೂ ಹೇಳಿ ಕಳುಹಿಸಿದ್ದೇನಂದರೆ--

ಸಂದರ್ಭದೊಂದಿಗೆ ಓದಿ · ಯೆಹೋಶುವ 10

1ಯೆಹೋಶುವನು ಆಯಿಯನ್ನು ಹಿಡಿದು ಯೆರಿಕೋವಿಗೂ ಅದರ ಅರಸನಿಗೂ ಮಾಡಿದ ಹಾಗೆಯೇ ಆಯಿಗೂ ಅದರ ಅರಸನಿಗೂ ಮಾಡಿ ಅದನ್ನು ಹಿಡಿದು ಸಂಪೂರ್ಣ ನಾಶ ಮಾಡಿ ದನೆಂದೂ ಗಿಬ್ಯೋನಿನ ನಿವಾಸಿಗಳು ಇಸ್ರಾಯೇಲಿನ ಸಂಗಡ ಸಮಾಧಾನ ಮಾಡಿಕೊಂಡು ಅವರಲ್ಲಿ ಇದ್ದಾ ರೆಂದೂ

2ಯೆರೂಸಲೇಮಿನ ಅರಸನಾದ ಅದೋನೀ ಚೆದೆಕನು ಕೇಳಿ ಬಹು ಭಯಪಟ್ಟರು. ಯಾಕಂದರೆ ಗಿಬ್ಯೋನ್‌ ರಾಜಪಟ್ಟಣಗಳ ಹಾಗೆ ದೊಡ್ಡ ಪಟ್ಟಣ ವಾಗಿತ್ತು; ಮತ್ತು ಆಯಿಗಿಂತಲೂ ದೊಡ್ಡದಾಗಿತ್ತು; ಇದಲ್ಲದೆ ಅದರ ಮನುಷ್ಯರು ಪರಾಕ್ರಮಶಾಲಿಗಳಾ ಗಿದ್ದರು.

3ಆದದರಿಂದ ಯೆರೂಸಲೇಮಿನ ಅರಸನಾದ ಅದೋನೀಚೆದೆಕನು ಹೆಬ್ರೋನಿನ ಅರಸನಾದ ಹೋಹಾಮನಿಗೂ ಯರ್ಮೂತಿನ ಅರಸನಾದ ಪಿರಾಮನಿಗೂ ಲಾಕೀಷಿನ ಅರಸನಾದ ಯಾಫೀಯ ನಿಗೂ ಎಗ್ಲೋನಿನ ಅರಸನಾದ ದೆಬೀರನಿಗೂ ಹೇಳಿ ಕಳುಹಿಸಿದ್ದೇನಂದರೆ--

4ಗಿಬ್ಯೋನು ಯೆಹೋಶುವನ ಸಂಗಡವೂ ಇಸ್ರಾಯೇಲ್‌ ಮಕ್ಕಳ ಸಂಗಡವೂ ಸಮಾಧಾನಮಾಡಿಕೊಂಡದ್ದರಿಂದ ನಾವು ಅದನ್ನು ಹೊಡೆಯುವಂತೆ ನೀವು ನನ್ನ ಬಳಿಗೆ ಬಂದು ನನಗೆ ಸಹಾಯಮಾಡಿರಿ ಅಂದನು.

5ಹಾಗೆಯೇ ಅಮೋರಿ ಯರ ಅರಸುಗಳಾದ ಯೆರೂಸಲೇಮಿನ ಅರಸನೂ ಹೆಬ್ರೋನಿನ ಅರಸನೂ ಯರ್ಮೂತಿನ ಅರಸನೂ ಲಾಕೀಷಿನ ಅರಸನೂ ಎಗ್ಲೋನಿನ ಅರಸನೂ ಈ ಐದು ಮಂದಿ ಅರಸುಗಳು ಕೂಡಿಕೊಂಡು ಅವರೂ ಅವರ ಸೈನ್ಯವೂ ಹೊರಟುಹೋಗಿ ಗಿಬ್ಬೋನಿನ ಮುಂದೆ ಪಾಳೆಯ ಮಾಡಿಕೊಂಡು ಅದರ ಮೇಲೆ ಯುದ್ಧಮಾಡಿ ದರು.

ಯೆಹೋಶುವ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी