೨ ಪೂರ್ವಕಾಲವೃತ್ತಾಂತ 1:14

ಸೊಲೊಮೋನನು ರಥಗಳನ್ನೂ ರಾಹುತರನ್ನೂ ಕೂಡಿಸಿದನು. ಅವನ ರಥಗಳು ಸಾವಿರದ ನಾನೂರು ರಾಹುತರು ಹನ್ನೆರಡು ಸಾವಿರ, ಇವರನ್ನು ರಥದ ಪಟ್ಟಣಗಳಲ್ಲಿಯೂ ಯೆರೂಸಲೇಮಿನಲ್ಲಿ ಅರಸನ ಬಳಿಯಲ್ಲಿಯೂ ಇರಿಸಿದನು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 1

12ಇದಲ್ಲದೆ ನಿನಗಿಂತ ಮುಂಚೆ ಇದ್ದ ಅರಸುಗಳಲ್ಲಿ ಯಾರಿಗೂ ಇಲ್ಲದಂಥ ನಿನ್ನ ತರುವಾಯ ಯಾರಿಗೂ ಇರದಂಥ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ಕೊಡುವೆನು ಅಂದನು.

13ತರುವಾಯ ಸೊಲೊಮೋನನು ಸಭೆಯ ಗುಡಾರವನ್ನು ಬಿಟ್ಟು ಗಿಬ್ಯೋನಿನಲ್ಲಿರುವ ಉನ್ನತ ಸ್ಥಳದಿಂದ ಯೆರೂಸ ಲೇಮಿಗೆ ಬಂದು ಇಸ್ರಾಯೇಲನ್ನು ಆಳಿದನು.

14ಸೊಲೊಮೋನನು ರಥಗಳನ್ನೂ ರಾಹುತರನ್ನೂ ಕೂಡಿಸಿದನು. ಅವನ ರಥಗಳು ಸಾವಿರದ ನಾನೂರು ರಾಹುತರು ಹನ್ನೆರಡು ಸಾವಿರ, ಇವರನ್ನು ರಥದ ಪಟ್ಟಣಗಳಲ್ಲಿಯೂ ಯೆರೂಸಲೇಮಿನಲ್ಲಿ ಅರಸನ ಬಳಿಯಲ್ಲಿಯೂ ಇರಿಸಿದನು.

15ಅರಸನು ಯೆರೂ ಸಲೇಮಿನಲ್ಲಿ ಬೆಳ್ಳಿಬಂಗಾರವನ್ನು ಕಲ್ಲುಗಳ ಹಾಗೆಯೂ ದೇವದಾರು ಮರಗಳನ್ನು ತಗ್ಗಿನಲ್ಲಿರುವ ಆಲದ ಮರ ಗಳ ಹಾಗೆಯೂ ಮಾಡಿದನು.

16ಇದಲ್ಲದೆ ಸೊಲೊ ಮೋನನಿಗೋಸ್ಕರ ಐಗುಪ್ತದಿಂದ ಕುದುರೆಗಳೂ ಸಣ ಬಿನ ನೂಲೂ ತರಲ್ಪಟ್ಟವು; ಅರಸನ ವರ್ತಕರು ಈ ಸಣಬಿನ ನೂಲನ್ನು ಕ್ರಯಕ್ಕೆ ತೆಗೆದುಕೊಂಡರು.

೨ ಪೂರ್ವಕಾಲವೃತ್ತಾಂತ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी