ಆದಿಕಾಂಡ 31:45

ಆಗ ಯಾಕೋಬನು ಒಂದು ಕಲ್ಲನ್ನು ತೆಗೆದು ಕೊಂಡು ಸ್ತಂಭವಾಗಿ ನಿಲ್ಲಿಸಿದನು;

ಸಂದರ್ಭದೊಂದಿಗೆ ಓದಿ · ಆದಿಕಾಂಡ 31

43ಲಾಬಾನನು ಅದಕ್ಕೆ ಉತ್ತರವಾಗಿ ಯಾಕೋಬನಿಗೆ --ಈ ಕುಮಾರ್ತೆಯರು ನನ್ನ ಕುಮಾರ್ತೆಯರೇ; ಈ ಮಕ್ಕಳೂ ನನ್ನ ಮಕ್ಕಳೇ; ಈ ಮಂದೆಯೂ ನನ್ನ ಮಂದೆಯೇ; ಅಂತೂ ನೀನು ನೋಡುವದೆಲ್ಲಾ ನನ್ನದೇ. ಹಾಗಾದರೆ ನನ್ನ ಕುಮಾರ್ತೆಯರಿಗಾಗಲಿ ಅವರು ಹೆತ್ತ ಮಕ್ಕಳಿಗಾಗಲಿ ನಾನು ಈಹೊತ್ತು ಏನು ಮಾಡಲಿ?

44ಆದದರಿಂದ ನೀನು ಈಗ ಬಾ, ನಾನೂ ನೀನೂ ಒಡಂಬಡಿಕೆಯನ್ನು ಮಾಡೋಣ; ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ ಅಂದನು.

45ಆಗ ಯಾಕೋಬನು ಒಂದು ಕಲ್ಲನ್ನು ತೆಗೆದು ಕೊಂಡು ಸ್ತಂಭವಾಗಿ ನಿಲ್ಲಿಸಿದನು;

46ಯಾಕೋಬನು ತನ್ನ ಸಹೋದರರಿಗೆ (ಕಡೆಯವರಿಗೆ)--ಕಲ್ಲುಗಳನ್ನು ಕೂಡಿಸಿರಿ ಅಂದನು. ಅವರು ಕಲ್ಲುಗಳನ್ನು ತಕ್ಕೊಂಡು ಒಂದು ಕುಪ್ಪೆ ಮಾಡಿ ಆ ಕುಪ್ಪೆಯ ಮೇಲೆ ಅವರು ಊಟಮಾಡಿದರು.

47ಆ ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು; ಯಾಕೋ ಬನು ಗಲೇದ್‌ ಎಂದೂ ಹೆಸರಿಟ್ಟನು;

ಆದಿಕಾಂಡ 31 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी