ಆಗ ಯಾಕೋಬನು ಬೇರ್ಷೆಬದಿಂದ ಖಾರಾ ನಿನ ಕಡೆಗೆ ಹೊರಟನು.
8ಏಸಾವನು ನೋಡಿ ದಾಗ ಕಾನಾನ್ಯರ ಕುಮಾರ್ತೆಯರು ತನ್ನ ತಂದೆಯಾದ ಇಸಾಕನಿಗೆ ಮೆಚ್ಚಿಗೆಯಾಗಲಿಲ್ಲವೆಂದು ತಿಳಿದು
9ಅವನು ಇಷ್ಮಾಯೇಲನ ಬಳಿಗೆ ಹೋಗಿ ತನಗಿದ್ದ ಹೆಂಡತಿಯರಲ್ಲದೆ ಅಬ್ರಹಾಮನ ಮಗನಾದ ಇಷ್ಮಾ ಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿರುವ ಮಹಲತ್ಳನ್ನು ತನ್ನ ಹೆಂಡತಿಯಾಗಿ ತಕ್ಕೊಂಡನು.
10ಆಗ ಯಾಕೋಬನು ಬೇರ್ಷೆಬದಿಂದ ಖಾರಾ ನಿನ ಕಡೆಗೆ ಹೊರಟನು.
11ಅವನು ಒಂದು ಸ್ಥಳಕ್ಕೆ ಸೇರಿದಾಗ ಸೂರ್ಯಾಸ್ತಮಾನವಾದದ್ದರಿಂದ ಅಲ್ಲಿ ಇಳುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದನ್ನು ತೆಗೆದುಕೊಂಡು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲಿ ಮಲಗಿಕೊಂಡನು.
12ಆಗ ಅವನು ಕನಸು ಕಂಡನು. ಇಗೋ, ಏಣಿಯು ಭೂಮಿಯ ಮೇಲೆ ನಿಲ್ಲಿಸಲ್ಪಟ್ಟಿತ್ತು. ಅದರ ತುದಿಯು ಆಕಾಶಕ್ಕೆ ಮುಟ್ಟಿತ್ತು. ಇಗೋ, ದೇವದೂತರು ಅದರ ಮೇಲೆ ಏರುತ್ತಾ ಇಳಿಯುತ್ತಾ ಇದ್ದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ