ಆದಿಕಾಂಡ 28:12

ಆಗ ಅವನು ಕನಸು ಕಂಡನು. ಇಗೋ, ಏಣಿಯು ಭೂಮಿಯ ಮೇಲೆ ನಿಲ್ಲಿಸಲ್ಪಟ್ಟಿತ್ತು. ಅದರ ತುದಿಯು ಆಕಾಶಕ್ಕೆ ಮುಟ್ಟಿತ್ತು. ಇಗೋ, ದೇವದೂತರು ಅದರ ಮೇಲೆ ಏರುತ್ತಾ ಇಳಿಯುತ್ತಾ ಇದ್ದರು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 28

10ಆಗ ಯಾಕೋಬನು ಬೇರ್ಷೆಬದಿಂದ ಖಾರಾ ನಿನ ಕಡೆಗೆ ಹೊರಟನು.

11ಅವನು ಒಂದು ಸ್ಥಳಕ್ಕೆ ಸೇರಿದಾಗ ಸೂರ್ಯಾಸ್ತಮಾನವಾದದ್ದರಿಂದ ಅಲ್ಲಿ ಇಳುಕೊಂಡನು. ಅವನು ಅಲ್ಲಿದ್ದ ಕಲ್ಲುಗಳಲ್ಲಿ ಒಂದನ್ನು ತೆಗೆದುಕೊಂಡು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲಿ ಮಲಗಿಕೊಂಡನು.

12ಆಗ ಅವನು ಕನಸು ಕಂಡನು. ಇಗೋ, ಏಣಿಯು ಭೂಮಿಯ ಮೇಲೆ ನಿಲ್ಲಿಸಲ್ಪಟ್ಟಿತ್ತು. ಅದರ ತುದಿಯು ಆಕಾಶಕ್ಕೆ ಮುಟ್ಟಿತ್ತು. ಇಗೋ, ದೇವದೂತರು ಅದರ ಮೇಲೆ ಏರುತ್ತಾ ಇಳಿಯುತ್ತಾ ಇದ್ದರು.

13ಇಗೋ, ಕರ್ತನು ಅದರ ಮೇಲೆ ನಿಂತುಕೊಂಡು ಹೇಳಿದ್ದೇನಂದರೆ--ನಿನ್ನ ತಂದೆ ಯಾದ ಅಬ್ರಹಾಮನ ಕರ್ತನಾದ ದೇವರೂ ಇಸಾಕನ ದೇವರೂ ನಾನೇ, ನೀನು ಮಲಗಿರುವ ಭೂಮಿಯನ್ನು ನಿನಗೂ ನಿನ್ನ ಸಂತತಿಗೂ ಕೊಡುವೆನು.

14ನಿನ್ನ ಸಂತತಿಯು ಭೂಮಿಯ ಧೂಳಿನಷ್ಟು ಆಗುವದು; ನೀನು ಪಶ್ಚಿಮ ಪೂರ್ವ ಉತ್ತರ ದಕ್ಷಿಣಗಳಿಗೆ ಹರಡಿಕೊಳ್ಳುತ್ತೀ. ನಿನ್ನಿಂದಲೂ ನಿನ್ನ ಸಂತತಿಯಿಂದಲೂ ಭೂಮಿಯ ಎಲ್ಲಾ ಕುಲದವರು ಆಶೀರ್ವದಿಸಲ್ಪ ಡುವರು.

ಆದಿಕಾಂಡ 28 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी