ಎಸ್ತೇರಳು 5:3

ಆಗ ಅರಸನು ಅವಳಿಗೆ--ರಾಣಿಯಾದ ಎಸ್ತೇರಳೇ, ನಿನಗೆ ಏನು ಬೇಕು? ನಿನ್ನ ವಿಜ್ಞಾಪನೆ ಏನು? ಅದು ರಾಜ್ಯದ ಅರ್ಧಭಾಗವಾಗಿದ್ದರೂ ನಿನಗೆ ಕೊಡಲ್ಪಡುವದ ಅಂದನು.

ಸಂದರ್ಭದೊಂದಿಗೆ ಓದಿ · ಎಸ್ತೇರಳು 5

1ಮೂರನೇ ದಿನದಲ್ಲಿ ಏನಾಯಿತಂದರೆ, ಎಸ್ತೇರಳು ರಾಜ ಭೂಷಣಗಳನ್ನು ಧರಿಸಿ ಕೊಂಡು ಅರಮನೆಗೆ ಎದುರಾಗಿರುವ ಅರಸನ ಮನೆಯ ಅಂಗಳದಲ್ಲಿ ಹೋಗಿ ನಿಂತಳು. ಅರಸನು ರಾಜ ಮನೆ ಯಲ್ಲಿ ಬಾಗಲಿಗೆದುರಾಗಿ ತನ್ನ ರಾಜ ಸಿಂಹಾಸನದ ಮೇಲೆ ಕುಳಿತಿದ್ದನು.

2ಅರಸನು ಅಂಗಳದಲ್ಲಿ ನಿಂತಿರುವ ರಾಣಿಯಾದ ಎಸ್ತೇರಳನ್ನು ಕಂಡಾಗ ಆಕೆಯು ಅವನ ಸಮ್ಮುಖದಲ್ಲಿ ದಯೆಹೊಂದಿದ್ದರಿಂದ ಅರಸನು ತನ್ನ ಕೈಯಲ್ಲಿದ್ದ ಬಂಗಾರದ ಮುದ್ರೆ ಕೋಲನ್ನು ಎಸ್ತೇರಳ ಬಳಿಗೆ ಚಾಚಿದನು. ಎಸ್ತೇರಳು ಸವಿಾಪಕ್ಕೆ ಬಂದು ಕೋಲಿನ ತುದಿಯನ್ನು ಮುಟ್ಟಿದಳು.

3ಆಗ ಅರಸನು ಅವಳಿಗೆ--ರಾಣಿಯಾದ ಎಸ್ತೇರಳೇ, ನಿನಗೆ ಏನು ಬೇಕು? ನಿನ್ನ ವಿಜ್ಞಾಪನೆ ಏನು? ಅದು ರಾಜ್ಯದ ಅರ್ಧಭಾಗವಾಗಿದ್ದರೂ ನಿನಗೆ ಕೊಡಲ್ಪಡುವದ ಅಂದನು.

4ಅದಕ್ಕೆ ಎಸ್ತೇರಳು--ಅರಸನಿಗೆ ಸಮ್ಮತಿಯಾ ದರೆ ನಾನು ಅವನಿಗೋಸ್ಕರ ಸಿದ್ಧಮಾಡಿದ ಔತಣಕ್ಕೆ ಅರಸನೂ ಹಾಮಾನನೂ ಈಹೊತ್ತು ಬರಬೇಕು ಅಂದಳು.

5ಆಗ ಅರಸನು--ಎಸ್ತೇರಳು ಹೇಳಿದ ಪ್ರಕಾರ ಮಾಡಲು ಹಾಮಾನನನ್ನು ತ್ವರೆಪಡಿಸಿರಿ ಅಂದನು. ಎಸ್ತೇರಳು ಮಾಡಿಸಿದ ಔತಣಕ್ಕೆ ಅರಸನೂ ಹಾಮಾನನೂ ಬಂದರು.

ಎಸ್ತೇರಳು 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी