ನ್ಯಾಯಸ್ಥಾಪಕರು 19:5

ಆದರೆ ನಾಲ್ಕನೇ ದಿನ ಉದಯದಲ್ಲಿ ಅವರು ಎದ್ದ ತರುವಾಯ ಅವನು ಹೋಗುವದಕ್ಕೆ ಎದ್ದಾಗ ಆ ಸ್ತ್ರೀಯ ತಂದೆ ತನ್ನ ಅಳಿಯನಿಗೆ--ನೀನು ಸ್ವಲ್ಪ ರೊಟ್ಟಿ ಯಿಂದ ನಿನ್ನ ಹೃದಯವನ್ನು ಆದರಿಸಿಕೋ; ತರುವಾಯ ನೀವು ಹೋಗಬಹುದು ಅಂದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 19

3ಆಗ ಅವಳ ಗಂಡನು ಎದ್ದು ಅವಳ ಸಂಗಡ ಪ್ರೀತಿಯಲ್ಲಿ ಮಾತನಾಡಿ ಅವಳನ್ನು ತಿರಿಗಿ ಕರತರುವದಕ್ಕೆ ತನ್ನ ಊಳಿಗದವನನ್ನೂ ಎರಡು ಕತ್ತೆಗಳನ್ನೂ ತಕ್ಕೊಂಡು ಅವಳ ಬಳಿಗೆ ಹೋದನು. ಅವಳು ಅವನನ್ನು ತನ್ನ ತಂದೆಯ ಮನೆಗೆ ಕರಕೊಂಡು ಹೋದಳು. ಹೆಂಗಸಿನ ತಂದೆ ಅವನನ್ನು ಕಂಡಾಗ ಅವನನ್ನು ಕಂಡುಕೊಂಡ ದ್ದರಿಂದ ಸಂತೋಷಪಟ್ಟನು.

4ಆ ಸ್ತ್ರೀಯ ತಂದೆಯಾದ ಅವನ ಮಾವನು ಅವನನ್ನು ಇರಿಸಿಕೊಂಡದ್ದರಿಂದ ಅವನು ಮೂರು ದಿನ ಅವನ ಸಂಗಡ ಇದ್ದನು. ಅವರು ತಿಂದು ಕುಡಿದು ಅಲ್ಲಿ ಇಳುಕೊಂಡಿದ್ದರು.

5ಆದರೆ ನಾಲ್ಕನೇ ದಿನ ಉದಯದಲ್ಲಿ ಅವರು ಎದ್ದ ತರುವಾಯ ಅವನು ಹೋಗುವದಕ್ಕೆ ಎದ್ದಾಗ ಆ ಸ್ತ್ರೀಯ ತಂದೆ ತನ್ನ ಅಳಿಯನಿಗೆ--ನೀನು ಸ್ವಲ್ಪ ರೊಟ್ಟಿ ಯಿಂದ ನಿನ್ನ ಹೃದಯವನ್ನು ಆದರಿಸಿಕೋ; ತರುವಾಯ ನೀವು ಹೋಗಬಹುದು ಅಂದನು.

6ಅವರಿಬ್ಬರು ಕುಳಿತು ಕೂಡಿ ತಿಂದು ಕುಡಿದರು. ಆ ಸ್ತ್ರೀಯ ತಂದೆ ಆ ಮನುಷ್ಯನಿಗೆ--ನೀನು ದಯಮಾಡಿ ನಿನ್ನ ಹೃದಯ ವನ್ನು ಸಂತೋಷಪಡಿಸುವದಕ್ಕೆ ಈ ರಾತ್ರಿ ಇರು ಅಂದನು.

7ಹೋಗುವದಕ್ಕೆ ಆ ಮನುಷ್ಯನು ಎದ್ದಾಗ ಅವನ ಮಾವನು ಅವನನ್ನು ಬಲವಂತ ಮಾಡಿದ್ದರಿಂದ ಅವನು ಆ ರಾತ್ರಿ ಅಲ್ಲಿದ್ದನು.

ನ್ಯಾಯಸ್ಥಾಪಕರು 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी