ಹೋಗುವದಕ್ಕೆ ಆ ಮನುಷ್ಯನು ಎದ್ದಾಗ ಅವನ ಮಾವನು ಅವನನ್ನು ಬಲವಂತ ಮಾಡಿದ್ದರಿಂದ ಅವನು ಆ ರಾತ್ರಿ ಅಲ್ಲಿದ್ದನು.
5ಆದರೆ ನಾಲ್ಕನೇ ದಿನ ಉದಯದಲ್ಲಿ ಅವರು ಎದ್ದ ತರುವಾಯ ಅವನು ಹೋಗುವದಕ್ಕೆ ಎದ್ದಾಗ ಆ ಸ್ತ್ರೀಯ ತಂದೆ ತನ್ನ ಅಳಿಯನಿಗೆ--ನೀನು ಸ್ವಲ್ಪ ರೊಟ್ಟಿ ಯಿಂದ ನಿನ್ನ ಹೃದಯವನ್ನು ಆದರಿಸಿಕೋ; ತರುವಾಯ ನೀವು ಹೋಗಬಹುದು ಅಂದನು.
6ಅವರಿಬ್ಬರು ಕುಳಿತು ಕೂಡಿ ತಿಂದು ಕುಡಿದರು. ಆ ಸ್ತ್ರೀಯ ತಂದೆ ಆ ಮನುಷ್ಯನಿಗೆ--ನೀನು ದಯಮಾಡಿ ನಿನ್ನ ಹೃದಯ ವನ್ನು ಸಂತೋಷಪಡಿಸುವದಕ್ಕೆ ಈ ರಾತ್ರಿ ಇರು ಅಂದನು.
7ಹೋಗುವದಕ್ಕೆ ಆ ಮನುಷ್ಯನು ಎದ್ದಾಗ ಅವನ ಮಾವನು ಅವನನ್ನು ಬಲವಂತ ಮಾಡಿದ್ದರಿಂದ ಅವನು ಆ ರಾತ್ರಿ ಅಲ್ಲಿದ್ದನು.
8ಐದನೇ ದಿನ ಉದಯ ದಲ್ಲಿ ಅವನು ಹೋಗುವದಕ್ಕೆ ಎದ್ದಾಗ ಆ ಸ್ತ್ರೀಯ ತಂದೆ--ನೀನು ದಯಮಾಡಿ ನಿನ್ನ ಹೃದಯವನ್ನು ಆದರಿಸಿಕೋ ಅಂದನು. ಹಾಗೆಯೇ ಅವನು ಇಳಿ ಹೊತ್ತಿನ ವರೆಗೆ ಆಲಸ್ಯವಾಗಿದ್ದು ಇಬ್ಬರೂ ತಿಂದರು.
9ಅವನೂ ಅವನ ಉಪಪತ್ನಿಯೂ ಅವನ ಊಳಿಗದ ವನೂ ಹೋಗುವದಕ್ಕೆ ಎದ್ದಾಗ ಹೆಂಗಸಿನ ತಂದೆ ಯಾದ ಅವನ ಮಾವನು ಅವನಿಗೆ--ಇಗೋ, ಹೊತ್ತು ಹೋಗಿ ಸಂಜೆಯಾಯಿತು; ಈ ರಾತ್ರಿ ನೀನು ದಯ ಮಾಡಿ ಇಲ್ಲಿ ಇರು; ಹೊತ್ತು ಮುಣುಗುತ್ತಾ ಬಂತು; ನಿನ್ನ ಹೃದಯವನ್ನು ಸಂತೋಷಪಡಿಸುವ ಹಾಗೆ ಈ ರಾತ್ರಿ ಇಲ್ಲಿದ್ದು ನಿನ್ನ ಗುಡಾರಕ್ಕೆ ಹೋಗುವ ಹಾಗೆ ನಾಳೆ ಬೆಳಿಗ್ಗೆ ಎದ್ದು ನಿಮ್ಮ ಮಾರ್ಗ ಹಿಡಿದು ಹೋಗ ಬಹುದು ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ