ಯಾಜಕಕಾಂಡ 20:13

ಒಬ್ಬ ಮನುಷ್ಯನು ಸ್ತ್ರೀಯೊಂದಿಗೆ ಮಲಗುವಂತೆ ಮತ್ತೊಬ್ಬ ಮನುಷ್ಯನೊಂದಿಗೆ ಮಲಗಿದರೆ ಅವರಿಬ್ಬರೂ ಅಸಹ್ಯ ವಾದದ್ದನ್ನು ಮಾಡಿದವರಾಗಿದ್ದಾರೆ; ಅವರಿಗೆ ನಿಶ್ಚಯ ವಾಗಿಯೂ ಮರಣದಂಡನೆ ವಿಧಿಸಬೇಕು; ಅವರ ರಕ್ತವು ಅವರ ಮೇಲೆ ಇರುವದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 20

11ತನ್ನ ತಂದೆಯ ಹೆಂಡತಿಯೊಡನೆ ಸಂಗಮಿಸುವವನು ತನ್ನ ತಂದೆಯ ಬೆತ್ತಲೆತನವನ್ನು ಕಾಣುವಂತೆ ಮಾಡಿದ್ದಾನೆ; ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರ ರಕ್ತವು ಅವರ ಮೇಲೆ ಇರುವದು;

12ಒಬ್ಬನು ತನ್ನ ಸೊಸೆಯೊಂದಿಗೆ ಸಂಗಮಿಸಿದರೆ ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರು ಗಲಿಬಿಲಿಯನ್ನುಂಟುಮಾಡಿದ್ದಾರೆ; ಅವರ ರಕ್ತವು ಅವರ ಮೇಲೆ ಇರುವದು.

13ಒಬ್ಬ ಮನುಷ್ಯನು ಸ್ತ್ರೀಯೊಂದಿಗೆ ಮಲಗುವಂತೆ ಮತ್ತೊಬ್ಬ ಮನುಷ್ಯನೊಂದಿಗೆ ಮಲಗಿದರೆ ಅವರಿಬ್ಬರೂ ಅಸಹ್ಯ ವಾದದ್ದನ್ನು ಮಾಡಿದವರಾಗಿದ್ದಾರೆ; ಅವರಿಗೆ ನಿಶ್ಚಯ ವಾಗಿಯೂ ಮರಣದಂಡನೆ ವಿಧಿಸಬೇಕು; ಅವರ ರಕ್ತವು ಅವರ ಮೇಲೆ ಇರುವದು.

14ಒಬ್ಬ ಮನುಷ್ಯನು ತನಗೆ ಒಬ್ಬ ಹೆಂಡತಿಯನ್ನೂ ಅವಳ ತಾಯಿಯನ್ನೂ ತೆಗೆದುಕೊಂಡರೆ ಅದು ದುಷ್ಟತನವಾಗಿದೆ; ನಿಮ್ಮಲ್ಲಿ ದುಷ್ಟತನವು ಇರದಂತೆ ಅವನೂ ಅವರೂ ಬೆಂಕಿ ಯಿಂದ ಸುಡಲ್ಪಡಬೇಕು.

15ಒಬ್ಬನು ಪಶುವಿನೊಂದಿಗೆ ಸಂಗಮಿಸಿದರೆ ಅವನಿಗೆ ನಿಶ್ಚಯವಾಗಿ ಮರಣದಂಡನೆ ಯಾಗಬೇಕು, ನೀವು ಆ ಪಶುವನ್ನು ವಧಿಸಬೇಕು.

ಯಾಜಕಕಾಂಡ 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी