ಯಾಜಕಕಾಂಡ 20:12

ಒಬ್ಬನು ತನ್ನ ಸೊಸೆಯೊಂದಿಗೆ ಸಂಗಮಿಸಿದರೆ ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರು ಗಲಿಬಿಲಿಯನ್ನುಂಟುಮಾಡಿದ್ದಾರೆ; ಅವರ ರಕ್ತವು ಅವರ ಮೇಲೆ ಇರುವದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 20

10ಒಬ್ಬನು ಮತ್ತೊಬ್ಬನ ಹೆಂಡತಿಯೊಡನೆ ವ್ಯಭಿ ಚಾರಮಾಡಿದರೆ, ಅಂದರೆ ತನ್ನ ನೆರೆಯವನ ಹೆಂಡ ತಿಯೊಡನೆ ವ್ಯಭಿಚಾರಮಾಡಿದರೆ ವ್ಯಭಿಚಾರ ಮಾಡುವವನಿಗೂ ವ್ಯಭಿಚಾರಮಾಡುವವಳಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು.

11ತನ್ನ ತಂದೆಯ ಹೆಂಡತಿಯೊಡನೆ ಸಂಗಮಿಸುವವನು ತನ್ನ ತಂದೆಯ ಬೆತ್ತಲೆತನವನ್ನು ಕಾಣುವಂತೆ ಮಾಡಿದ್ದಾನೆ; ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರ ರಕ್ತವು ಅವರ ಮೇಲೆ ಇರುವದು;

12ಒಬ್ಬನು ತನ್ನ ಸೊಸೆಯೊಂದಿಗೆ ಸಂಗಮಿಸಿದರೆ ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸ ಬೇಕು; ಅವರು ಗಲಿಬಿಲಿಯನ್ನುಂಟುಮಾಡಿದ್ದಾರೆ; ಅವರ ರಕ್ತವು ಅವರ ಮೇಲೆ ಇರುವದು.

13ಒಬ್ಬ ಮನುಷ್ಯನು ಸ್ತ್ರೀಯೊಂದಿಗೆ ಮಲಗುವಂತೆ ಮತ್ತೊಬ್ಬ ಮನುಷ್ಯನೊಂದಿಗೆ ಮಲಗಿದರೆ ಅವರಿಬ್ಬರೂ ಅಸಹ್ಯ ವಾದದ್ದನ್ನು ಮಾಡಿದವರಾಗಿದ್ದಾರೆ; ಅವರಿಗೆ ನಿಶ್ಚಯ ವಾಗಿಯೂ ಮರಣದಂಡನೆ ವಿಧಿಸಬೇಕು; ಅವರ ರಕ್ತವು ಅವರ ಮೇಲೆ ಇರುವದು.

14ಒಬ್ಬ ಮನುಷ್ಯನು ತನಗೆ ಒಬ್ಬ ಹೆಂಡತಿಯನ್ನೂ ಅವಳ ತಾಯಿಯನ್ನೂ ತೆಗೆದುಕೊಂಡರೆ ಅದು ದುಷ್ಟತನವಾಗಿದೆ; ನಿಮ್ಮಲ್ಲಿ ದುಷ್ಟತನವು ಇರದಂತೆ ಅವನೂ ಅವರೂ ಬೆಂಕಿ ಯಿಂದ ಸುಡಲ್ಪಡಬೇಕು.

ಯಾಜಕಕಾಂಡ 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी