ಆದರೆ ಕನ್ಯಾಸ್ತ್ರೀಯರು ಎರಡನೇ ಸಾರಿ ಕೂಡಿಸ ಲ್ಪಡುವಾಗ ಮೊರ್ದೆಕೈಯು ಅರಮನೆಯ ಬಾಗಲಲ್ಲಿ ಕುಳಿತಿದ್ದನು.
17ಅರಸನು ಸಕಲ ಸ್ತ್ರೀಯರಿಗಿಂತ ಎಸ್ತೇರಳನ್ನು ಪ್ರೀತಿ ಮಾಡಿದನು. ಅವಳಿಗೆ ಅವನ ಸಮ್ಮುಖದಲ್ಲಿ ಸಮಸ್ತ ಕನ್ಯಾಸ್ತ್ರೀಯರಿಗಿಂತ ಹೆಚ್ಚು ದಯವೂ ಕೃಪೆಯೂ ದೊರಕಿತು. ಆದದರಿಂದ ಅವನು ರಾಜಕಿರೀಟವನ್ನು ಅವಳ ತಲೆಯ ಮೇಲೆ ಇರಿಸಿ ಅವಳನ್ನು ವಷ್ಟಿಗೆ ಬದಲಾಗಿ ರಾಣಿಯಾಗಿ ಮಾಡಿದನು.
18ಆಗ ಅರಸನು ತನ್ನ ಸಮಸ್ತ ಪ್ರಧಾನರಿಗೂ ಸೇವಕರಿಗೂ ಎಸ್ತೇರಳ ಔತಣವೆಂದು ದೊಡ್ಡ ಔತಣವನ್ನು ಮಾಡಿಸಿ ಪ್ರಾಂತ್ಯ ಗಳಿಗೆ ಬಿಡುಗಡೆಯನ್ನು ಕೊಟ್ಟು ಅರಸನ ಸ್ಥಿತಿಗೆ ತಕ್ಕಂಥ ಬಹುಮಾನಗಳನ್ನು ಕೊಟ್ಟನು.
19ಆದರೆ ಕನ್ಯಾಸ್ತ್ರೀಯರು ಎರಡನೇ ಸಾರಿ ಕೂಡಿಸ ಲ್ಪಡುವಾಗ ಮೊರ್ದೆಕೈಯು ಅರಮನೆಯ ಬಾಗಲಲ್ಲಿ ಕುಳಿತಿದ್ದನು.
20ಎಸ್ತೇರಳು ಮೊರ್ದೆಕೈ ತನಗೆ ಆಜ್ಞಾ ಪಿಸಿದ ಹಾಗೆ ತನ್ನ ಬಂಧುಗಳಿಗೂ ತನ್ನ ಜನರಿಗೂ ತಿಳಿಸದೆ ಇದ್ದಳು. ಎಸ್ತೇರಳು ಮೊರ್ದೆಕೈಯ ಆರೈಕೆಯಲ್ಲಿ ಇದ್ದಾಗ ಅವನ ಆಜ್ಞೆಯನ್ನು ಕೈಕೊಂಡಿದ್ದಂತೆಯೇ ಅವಳು ಮಾಡಿದಳು.
21ಆ ದಿವಸಗಳಲ್ಲಿ ಮೊರ್ದೆಕೈಯು ಅರಮನೆಯ ಬಾಗಲಲ್ಲಿ ಕುಳಿತಿರು ವಾಗ ದ್ವಾರಪಾಲಕರಾದಂಥ ಅರಸನ ಮನೆವಾರ್ತೆ ಯವರಾದ ಬಿಗೆತಾನನೂ ತೆರೆಷನೂ ರೌದ್ರವುಳ್ಳ ವರಾಗಿ ಅರಸನಾದ ಅಹಷ್ವೇರೋಷನ ಮೇಲೆ ಕೈ ಹಾಕಲು ಹುಡುಕಿದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ