ಎಸ್ತೇರಳು 2:20

ಎಸ್ತೇರಳು ಮೊರ್ದೆಕೈ ತನಗೆ ಆಜ್ಞಾ ಪಿಸಿದ ಹಾಗೆ ತನ್ನ ಬಂಧುಗಳಿಗೂ ತನ್ನ ಜನರಿಗೂ ತಿಳಿಸದೆ ಇದ್ದಳು. ಎಸ್ತೇರಳು ಮೊರ್ದೆಕೈಯ ಆರೈಕೆಯಲ್ಲಿ ಇದ್ದಾಗ ಅವನ ಆಜ್ಞೆಯನ್ನು ಕೈಕೊಂಡಿದ್ದಂತೆಯೇ ಅವಳು ಮಾಡಿದಳು.

ಸಂದರ್ಭದೊಂದಿಗೆ ಓದಿ · ಎಸ್ತೇರಳು 2

18ಆಗ ಅರಸನು ತನ್ನ ಸಮಸ್ತ ಪ್ರಧಾನರಿಗೂ ಸೇವಕರಿಗೂ ಎಸ್ತೇರಳ ಔತಣವೆಂದು ದೊಡ್ಡ ಔತಣವನ್ನು ಮಾಡಿಸಿ ಪ್ರಾಂತ್ಯ ಗಳಿಗೆ ಬಿಡುಗಡೆಯನ್ನು ಕೊಟ್ಟು ಅರಸನ ಸ್ಥಿತಿಗೆ ತಕ್ಕಂಥ ಬಹುಮಾನಗಳನ್ನು ಕೊಟ್ಟನು.

19ಆದರೆ ಕನ್ಯಾಸ್ತ್ರೀಯರು ಎರಡನೇ ಸಾರಿ ಕೂಡಿಸ ಲ್ಪಡುವಾಗ ಮೊರ್ದೆಕೈಯು ಅರಮನೆಯ ಬಾಗಲಲ್ಲಿ ಕುಳಿತಿದ್ದನು.

20ಎಸ್ತೇರಳು ಮೊರ್ದೆಕೈ ತನಗೆ ಆಜ್ಞಾ ಪಿಸಿದ ಹಾಗೆ ತನ್ನ ಬಂಧುಗಳಿಗೂ ತನ್ನ ಜನರಿಗೂ ತಿಳಿಸದೆ ಇದ್ದಳು. ಎಸ್ತೇರಳು ಮೊರ್ದೆಕೈಯ ಆರೈಕೆಯಲ್ಲಿ ಇದ್ದಾಗ ಅವನ ಆಜ್ಞೆಯನ್ನು ಕೈಕೊಂಡಿದ್ದಂತೆಯೇ ಅವಳು ಮಾಡಿದಳು.

21ಆ ದಿವಸಗಳಲ್ಲಿ ಮೊರ್ದೆಕೈಯು ಅರಮನೆಯ ಬಾಗಲಲ್ಲಿ ಕುಳಿತಿರು ವಾಗ ದ್ವಾರಪಾಲಕರಾದಂಥ ಅರಸನ ಮನೆವಾರ್ತೆ ಯವರಾದ ಬಿಗೆತಾನನೂ ತೆರೆಷನೂ ರೌದ್ರವುಳ್ಳ ವರಾಗಿ ಅರಸನಾದ ಅಹಷ್ವೇರೋಷನ ಮೇಲೆ ಕೈ ಹಾಕಲು ಹುಡುಕಿದರು.

22ಈ ಕಾರ್ಯವು ಮೊರ್ದೆ ಕೈಯಿಗೆ ತಿಳಿದದ್ದರಿಂದ ಅವನು ಅದನ್ನು ರಾಣಿಯಾದ ಎಸ್ತೇರಳಿಗೆ ತಿಳಿಸಿದನು; ಎಸ್ತೇರಳು ಮೊರ್ದೆ ಕೈಯಿಯ ಹೆಸರಿನಲ್ಲಿ ಅದನ್ನು ಅರಸನಿಗೆ ತಿಳಿಸಿದಳು.

ಎಸ್ತೇರಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी