ಆಗ ನಾನು--ಓ ನನ್ನ ಒಡೆಯನೇ, ಇವೇನು ಅಂದೆನು. ಆಗ ನನ್ನ ಸಂಗಡ ಮಾತನಾಡಿದ ದೂತ ನು--ಇವೇನೆಂದು ನಿನಗೆ ತೋರಿಸುತ್ತೇನೆ ಅಂದೆನು.
7ದಾರ್ಯಾವೆಷನ ಎರಡನೆಯ ವರುಷದ ಹನ್ನೊಂ ದನೆ ತಿಂಗಳಾದ ಶೆಬಾಟ್ ಎಂಬ ತಿಂಗಳಿನ ಇಪ್ಪತ್ತ ನಾಲ್ಕನೆಯ ದಿನದಲ್ಲಿ ಕರ್ತನ ವಾಕ್ಯವು ಇದ್ದೋನಿನ ಮಗನಾದ ಬೆರೆಕ್ಯನ ಮಗನಾದ ಪ್ರವಾದಿಯಾದ ಜೆಕರ್ಯನಿಗೆ ಉಂಟಾಯಿತು. ಹೇಗೆಂದರೆ,
8ನಾನು ರಾತ್ರಿಯಲ್ಲಿ ನೋಡಿದಾಗ ಇಗೋ, ಕೆಂಪು ಕುದುರೆಯ ಮೇಲೆ ಸವಾರಿ ಮಾಡುವ ಒಬ್ಬ ಮನುಷ್ಯನು; ಅವನು ತಗ್ಗಿನಲ್ಲಿದ್ದ ಗಂಧದ ಗಿಡಗಳ ನಡುವೆ ನಿಂತಿದ್ದನು; ಅವನ ಹಿಂದೆ ಕೆಂಪು ಕಪಿಲ ಬಿಳೀ ಕುದುರೆಗಳು ಇದ್ದವು.
9ಆಗ ನಾನು--ಓ ನನ್ನ ಒಡೆಯನೇ, ಇವೇನು ಅಂದೆನು. ಆಗ ನನ್ನ ಸಂಗಡ ಮಾತನಾಡಿದ ದೂತ ನು--ಇವೇನೆಂದು ನಿನಗೆ ತೋರಿಸುತ್ತೇನೆ ಅಂದೆನು.
10ಆಗ ಗಂಧದ ಗಿಡಗಳ ನಡುವೆ ನಿಂತ ಮನುಷ್ಯನು ಉತ್ತರಕೊಟ್ಟು ಹೇಳಿದ್ದೇನಂದರೆ--ಇವರು ಭೂಮಿ ಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ ನಡೆದಾಡುವದಕ್ಕೆ ಕರ್ತನು ಕಳುಹಿಸಿದವರು ಅಂದನು.
11ಆಗ ಅವರು ಗಂಧದ ಗಿಡಗಳ ನಡುವೆ ನಿಂತ ಕರ್ತನ ದೂತನಿಗೆ ಉತ್ತರಕೊಟ್ಟು ಹೇಳಿದ್ದೇನಂದರೆ -- ಭೂಮಿಯಲ್ಲಿ ಇತ್ತಿಂದ ಅತ್ತ ಅತ್ತಿಂದ ಇತ್ತ ನಡೆದಾಡಿದ್ದೇವೆ; ಇಗೋ, ಭೂಮಿಯೆಲ್ಲಾ ಸುಮ್ಮನಿದ್ದು ಶಾಂತಿಯಾಗಿದೆ ಅಂದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ