ದಾನಿಯೇಲನು 11:14

ಅದೇ ಕಾಲದಲ್ಲಿ ದಕ್ಷಿಣದ ಅರಸನಿಗೆ ವಿರೋಧವಾಗಿ ಅನೇಕರು ಎದುರು ನಿಲ್ಲುವರು; ಅಲ್ಲದೆ ನಿನ್ನ ಜನರಲ್ಲಿ ದರೋಡೆಕೋರರು ಆ ದರ್ಶನವನ್ನು ಸ್ಥಾಪಿಸಬೇಕೆಂದು ತಮ್ಮನ್ನು ತಾವು ಹೆಚ್ಚಿಸಿಕೊಳ್ಳುವರು; ಆದರೆ ಅವರು ಬಿದ್ದು ಹೋಗುವರು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 11

12ಆ ಸಮೂಹವನ್ನು ಅವನು ತೆಗೆದು ಹಾಕಿದ ಮೇಲೆ ಅವನ ಹೃದಯವು ಹೆಚ್ಚಳಪಡುವದು; ಹೌದು, ಸಹಸ್ರಾರು ಸೈನಿಕರನ್ನು ಬೀಳಿಸಿದ್ದರೂ ಪ್ರಬಲವಾಗ ಲಾರನು.

13ಉತ್ತರದ ಅರಸನು ಮತ್ತೆ ತಿರುಗಿಕೊಂಡು ಮೊದಲನೇ ಸಾರಿಗಿಂತಲೂ ದೊಡ್ಡ ಸಮೂಹವನ್ನು ನಿಲ್ಲಿಸಿ ಕೆಲವು ವರುಷಗಳಾದ ಮೇಲೆ ದೊಡ್ಡ ಸೈನ್ಯದ ಸಂಗಡವೂ ಬಹಳ ಸಂಪತ್ತಿನ ಸಂಗಡವೂ ನಿಶ್ಚಯವಾಗಿ ಬರುವನು.

14ಅದೇ ಕಾಲದಲ್ಲಿ ದಕ್ಷಿಣದ ಅರಸನಿಗೆ ವಿರೋಧವಾಗಿ ಅನೇಕರು ಎದುರು ನಿಲ್ಲುವರು; ಅಲ್ಲದೆ ನಿನ್ನ ಜನರಲ್ಲಿ ದರೋಡೆಕೋರರು ಆ ದರ್ಶನವನ್ನು ಸ್ಥಾಪಿಸಬೇಕೆಂದು ತಮ್ಮನ್ನು ತಾವು ಹೆಚ್ಚಿಸಿಕೊಳ್ಳುವರು; ಆದರೆ ಅವರು ಬಿದ್ದು ಹೋಗುವರು.

15ಆದರೆ ಉತ್ತರದ ಅರಸನು ಬಂದು ಮುತ್ತಿಗೆ ಹಾಕಿ ದಿಬ್ಬವನ್ನು ಕೆಡವಿ ಕೋಟೆಯುಳ್ಳ ಪಟ್ಟಣಗಳನ್ನು ವಶಪಡಿಸಿಕೊಳ್ಳು ವನು; ದಕ್ಷಿಣದ ಭುಜಬಲವಾದರೂ ಅವನು ಆದು ಕೊಂಡ ಜನರಾದರೂ ನಿಲ್ಲುವದಕ್ಕೆ ಬಲವಿರುವದಿಲ್ಲ.

16ಆದರೆ ಅವನಿಗೆ ಎದುರಾಗಿ ಬರುವವನು ತನ್ನ ಇಷ್ಟದ ಪ್ರಕಾರ ಮಾಡುವನು; ಯಾರೂ ಅವನ ಮುಂದೆ ನಿಲ್ಲಲಾರರು; ಅವನು ರಮ್ಯವಾದ ದೇಶದಲ್ಲಿ ನಿಲ್ಲುವನು. ಅದು ಅವನ ಕೈಯಿಂದ ನಾಶವಾಗುವದು.

ದಾನಿಯೇಲನು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी