ಯಾಜಕಕಾಂಡ 10:14

ನೀನೂ ನಿನ್ನೊಂದಿಗೆ ನಿನ್ನ ಕುಮಾರರೂ ಕುಮಾರ್ತೆಯರೂ ಆಡಿಸುವ ಎದೆಯ ಭಾಗವನ್ನೂ ಪ್ರತ್ಯೇಕಿಸಿದ ಭುಜವನ್ನೂ ಶುದ್ಧ ಸ್ಥಳದಲ್ಲಿ ತಿನ್ನಬೇಕು; ಅವು ಇಸ್ರಾಯೇಲ್‌ ಮಕ್ಕಳ ಸಮಾಧಾನದ ಬಲಿಯ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಸಲ್ಲುವವುಗಳಾಗಿವೆ.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 10

12ಮೋಶೆಯು ಆರೋನನೊಂದಿಗೂ ಉಳಿದ ಅವನ ಕುಮಾರರಾದ ಎಲ್ಲಾಜಾರನೊಂದಿಗೂ ಈತಾ ಮಾರನೊಂದಿಗೂ ಮಾತನಾಡಿ ಹೇಳಿದ್ದೇನಂದರೆಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳಲ್ಲಿ ಉಳಿದಿರುವ ಆಹಾರ ಸಮರ್ಪಣೆಯನ್ನು ತೆಗೆದು ಕೊಂಡು ಅದನ್ನು ಯಜ್ಞವೇದಿಯ ಬಳಿಯಲ್ಲಿ ಹುಳಿ ಯಿಲ್ಲದೆ ತಿನ್ನಿರಿ; ಅದು ಅತಿ ಪರಿಶುದ್ಧವಾದದ್ದು.

13ನೀವು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಬೆಂಕಿಯಿಂದ ಮಾಡಿದ ಕರ್ತನ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಇವು ಸಲ್ಲತಕ್ಕವುಗಳು. ಹೀಗೆ ನಾನು ಆಜ್ಞೆ ಹೊಂದಿದ್ದೇನೆ.

14ನೀನೂ ನಿನ್ನೊಂದಿಗೆ ನಿನ್ನ ಕುಮಾರರೂ ಕುಮಾರ್ತೆಯರೂ ಆಡಿಸುವ ಎದೆಯ ಭಾಗವನ್ನೂ ಪ್ರತ್ಯೇಕಿಸಿದ ಭುಜವನ್ನೂ ಶುದ್ಧ ಸ್ಥಳದಲ್ಲಿ ತಿನ್ನಬೇಕು; ಅವು ಇಸ್ರಾಯೇಲ್‌ ಮಕ್ಕಳ ಸಮಾಧಾನದ ಬಲಿಯ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಸಲ್ಲುವವುಗಳಾಗಿವೆ.

15ಅವರು ಪ್ರತ್ಯೇ ಕಿಸಿದ ಭುಜವನ್ನೂ ಆಡಿಸುವ ಎದೆಯ ಭಾಗವನ್ನೂ ಬೆಂಕಿಯಿಂದ ಮಾಡಿದ ಕೊಬ್ಬಿನ ಸಮರ್ಪಣೆಗಳನ್ನೂ ಆಡಿಸುವದಕ್ಕೆ ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಯಾಗಿ ತರಬೇಕು; ಕರ್ತನು ಆಜ್ಞಾಪಿಸಿದ ಹಾಗೆ ಅದು ನಿನಗೂ ನಿನ್ನೊಂದಿಗೆ ನಿನ್ನ ಕುಮಾರರಿಗೂ ಸಲ್ಲತಕ್ಕದ್ದು; ಇದು ನಿತ್ಯ ಕಟ್ಟಳೆಯಾಗಿದೆ.

16ಆಗ ಮೋಶೆಯು ಶ್ರದ್ಧೆಯಿಂದ ಪಾಪದ ಬಲಿಯ ಮೇಕೆಯನ್ನು ಹುಡುಕಿದಾಗ ಅಗೋ, ಅದು ಸುಟ್ಟು ಹೋಗಿತ್ತು. ಅವನು ಆರೋನನ ಉಳಿದ ಕುಮಾರರಾದ ಎಲ್ಲಾಜಾರನ ಮೇಲೆಯೂ ಈತಾಮಾರನ ಮೇಲೆಯೂ ಕೋಪಗೊಂಡು ಹೇಳಿದ್ದೇನಂದರೆ--

ಯಾಜಕಕಾಂಡ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी