ಯಾಜಕಕಾಂಡ 10:15

ಅವರು ಪ್ರತ್ಯೇ ಕಿಸಿದ ಭುಜವನ್ನೂ ಆಡಿಸುವ ಎದೆಯ ಭಾಗವನ್ನೂ ಬೆಂಕಿಯಿಂದ ಮಾಡಿದ ಕೊಬ್ಬಿನ ಸಮರ್ಪಣೆಗಳನ್ನೂ ಆಡಿಸುವದಕ್ಕೆ ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಯಾಗಿ ತರಬೇಕು; ಕರ್ತನು ಆಜ್ಞಾಪಿಸಿದ ಹಾಗೆ ಅದು ನಿನಗೂ ನಿನ್ನೊಂದಿಗೆ ನಿನ್ನ ಕುಮಾರರಿಗೂ ಸಲ್ಲತಕ್ಕದ್ದು; ಇದು ನಿತ್ಯ ಕಟ್ಟಳೆಯಾಗಿದೆ.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 10

13ನೀವು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಬೆಂಕಿಯಿಂದ ಮಾಡಿದ ಕರ್ತನ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಇವು ಸಲ್ಲತಕ್ಕವುಗಳು. ಹೀಗೆ ನಾನು ಆಜ್ಞೆ ಹೊಂದಿದ್ದೇನೆ.

14ನೀನೂ ನಿನ್ನೊಂದಿಗೆ ನಿನ್ನ ಕುಮಾರರೂ ಕುಮಾರ್ತೆಯರೂ ಆಡಿಸುವ ಎದೆಯ ಭಾಗವನ್ನೂ ಪ್ರತ್ಯೇಕಿಸಿದ ಭುಜವನ್ನೂ ಶುದ್ಧ ಸ್ಥಳದಲ್ಲಿ ತಿನ್ನಬೇಕು; ಅವು ಇಸ್ರಾಯೇಲ್‌ ಮಕ್ಕಳ ಸಮಾಧಾನದ ಬಲಿಯ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಸಲ್ಲುವವುಗಳಾಗಿವೆ.

15ಅವರು ಪ್ರತ್ಯೇ ಕಿಸಿದ ಭುಜವನ್ನೂ ಆಡಿಸುವ ಎದೆಯ ಭಾಗವನ್ನೂ ಬೆಂಕಿಯಿಂದ ಮಾಡಿದ ಕೊಬ್ಬಿನ ಸಮರ್ಪಣೆಗಳನ್ನೂ ಆಡಿಸುವದಕ್ಕೆ ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಯಾಗಿ ತರಬೇಕು; ಕರ್ತನು ಆಜ್ಞಾಪಿಸಿದ ಹಾಗೆ ಅದು ನಿನಗೂ ನಿನ್ನೊಂದಿಗೆ ನಿನ್ನ ಕುಮಾರರಿಗೂ ಸಲ್ಲತಕ್ಕದ್ದು; ಇದು ನಿತ್ಯ ಕಟ್ಟಳೆಯಾಗಿದೆ.

16ಆಗ ಮೋಶೆಯು ಶ್ರದ್ಧೆಯಿಂದ ಪಾಪದ ಬಲಿಯ ಮೇಕೆಯನ್ನು ಹುಡುಕಿದಾಗ ಅಗೋ, ಅದು ಸುಟ್ಟು ಹೋಗಿತ್ತು. ಅವನು ಆರೋನನ ಉಳಿದ ಕುಮಾರರಾದ ಎಲ್ಲಾಜಾರನ ಮೇಲೆಯೂ ಈತಾಮಾರನ ಮೇಲೆಯೂ ಕೋಪಗೊಂಡು ಹೇಳಿದ್ದೇನಂದರೆ--

17ಅದು ಅತಿ ಪರಿಶುದ್ಧವಾದದರಿಂದಲೂ ಕರ್ತನ ಸನ್ನಿಧಿಯಲ್ಲಿ ಅವ ರಿಗಾಗಿ ಪ್ರಾಯಶ್ಚಿತ್ತಮಾಡುವದಕ್ಕಾಗಿಯೂ ಸಭೆಯ ಅಪರಾಧವನ್ನು ಹೊರುವದಕ್ಕಾಗಿ ದೇವರು ಅದನ್ನು ಕೊಟ್ಟದ್ದೆಂದೂ ನೀವು ತಿಳಿದು ಪಾಪಬಲಿಯನ್ನು ಪರಿ ಶುದ್ಧವಾದ ಸ್ಥಳದಲ್ಲಿ ಯಾಕೆ ತಿನ್ನಲಿಲ್ಲ?

ಯಾಜಕಕಾಂಡ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी