ಯಾಜಕಕಾಂಡ 25:50

ಅವನು ತನ್ನನ್ನು ಕೊಂಡುಕೊಂಡವನಿಗೆ ಮಾರಲ್ಪಟ್ಟ ವರುಷ ಮೊದಲುಗೊಂಡು ಜೂಬಿಲಿ ಸಂವತ್ಸರದ ವರೆಗೆ ಅವನೊಂದಿಗೆ ಲೆಕ್ಕಮಾಡಬೇಕು. ಅವನ ಮಾರಾಟದ ಕ್ರಯವು ವರುಷಗಳ ಲೆಕ್ಕದ ಪ್ರಕಾರ ಕೂಲಿಯಾಳಿನ ಸಮಯಕ್ಕೆ ತಕ್ಕಂತೆ ಅವನೊಂದಿಗೆ ಅದು ಇರುವದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 25

48ಹೀಗೆ ಅವನು ತನ್ನನ್ನು ಮಾರಿಕೊಂಡ ಮೇಲೆ ಅವನು ತಿರಿಗಿ ವಿಮೋಚಿಸಲ್ಪಡಬಹುದು. ಅವನ ಸಹೋದರರಲ್ಲಿ ಒಬ್ಬನು ಅವನನ್ನು ವಿಮೋಚಿಸ ಬಹುದು.

49ಅವನ ಚಿಕ್ಕಪ್ಪನಾಗಲಿ ಚಿಕ್ಕಪ್ಪನ ಮಗ ನಾಗಲಿ ಇಲ್ಲವೆ ಅವನ ಕುಟುಂಬದಲ್ಲಿ ಸವಿಾಪ ವಾಗಿರುವ ಸಂಬಂಧಿಕರಲ್ಲಿ ಯಾರಾಗಲಿ ಅವನನ್ನು ವಿಮೋಚಿಸಬಹುದು. ಇಲ್ಲವೆ ಅವನು ಶಕ್ತನಾಗಿದ್ದರೆ ತನ್ನನ್ನು ತಾನೇ ವಿಮೋಚಿಸಿಕೊಳ್ಳಬಹುದು.

50ಅವನು ತನ್ನನ್ನು ಕೊಂಡುಕೊಂಡವನಿಗೆ ಮಾರಲ್ಪಟ್ಟ ವರುಷ ಮೊದಲುಗೊಂಡು ಜೂಬಿಲಿ ಸಂವತ್ಸರದ ವರೆಗೆ ಅವನೊಂದಿಗೆ ಲೆಕ್ಕಮಾಡಬೇಕು. ಅವನ ಮಾರಾಟದ ಕ್ರಯವು ವರುಷಗಳ ಲೆಕ್ಕದ ಪ್ರಕಾರ ಕೂಲಿಯಾಳಿನ ಸಮಯಕ್ಕೆ ತಕ್ಕಂತೆ ಅವನೊಂದಿಗೆ ಅದು ಇರುವದು.

51ಇನ್ನು ಬಹಳ ವರುಷವಿದ್ದರೆ ಅವುಗಳ ಪ್ರಕಾರ ತನ್ನ ಕ್ರಯದ ಹಣದಲ್ಲಿ ವಿಮೋಚಿಸಲ್ಪಡಬೇಕು.

52ಜೂಬಿಲಿ ಸಂವತ್ಸರದ ವರೆಗೆ ಕೆಲವು ವರುಷಗಳು ಮಾತ್ರ ಉಳಿದಿದ್ದರೆ ಅವನೊಂದಿಗೆ ಎಣಿಸಬೇಕು. ಅವನ ವರುಷಗಳ ಮೇರೆಗೆ ತನ್ನ ವಿಮೋಚನೆಯ ಕ್ರಯವನ್ನು ತಿರುಗಿ ಅವನು ಅವನಿಗೆ ಸಲ್ಲಿಸಬೇಕು.

ಯಾಜಕಕಾಂಡ 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी