ಯಾಜಕಕಾಂಡ 25:49

ಅವನ ಚಿಕ್ಕಪ್ಪನಾಗಲಿ ಚಿಕ್ಕಪ್ಪನ ಮಗ ನಾಗಲಿ ಇಲ್ಲವೆ ಅವನ ಕುಟುಂಬದಲ್ಲಿ ಸವಿಾಪ ವಾಗಿರುವ ಸಂಬಂಧಿಕರಲ್ಲಿ ಯಾರಾಗಲಿ ಅವನನ್ನು ವಿಮೋಚಿಸಬಹುದು. ಇಲ್ಲವೆ ಅವನು ಶಕ್ತನಾಗಿದ್ದರೆ ತನ್ನನ್ನು ತಾನೇ ವಿಮೋಚಿಸಿಕೊಳ್ಳಬಹುದು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 25

47ನಿನ್ನ ಬಳಿಯಲ್ಲಿರುವ ಪರಕೀಯ ಇಲ್ಲವೆ ಪ್ರವಾ ಸಿಯ ಸಂಪತ್ತು ಹೆಚ್ಚಾಗಲಾಗಿ ನಿನ್ನ ಸಹೋದರನು ಅವನ ಬಳಿಯಲ್ಲಿ ಬಡವನಾಗಿ ನಿನ್ನ ಬಳಿಯಲ್ಲಿರುವ ಪರಕೀಯನಾಗಲಿ ಪ್ರವಾಸಿಯಾಗಲಿ ಪರಕೀಯನ ಸಂತತಿಯಲ್ಲಿ ಹುಟ್ಟಿದವನಿಗೆ ತನ್ನನ್ನು ಮಾರಿಕೊಂಡರೆ

48ಹೀಗೆ ಅವನು ತನ್ನನ್ನು ಮಾರಿಕೊಂಡ ಮೇಲೆ ಅವನು ತಿರಿಗಿ ವಿಮೋಚಿಸಲ್ಪಡಬಹುದು. ಅವನ ಸಹೋದರರಲ್ಲಿ ಒಬ್ಬನು ಅವನನ್ನು ವಿಮೋಚಿಸ ಬಹುದು.

49ಅವನ ಚಿಕ್ಕಪ್ಪನಾಗಲಿ ಚಿಕ್ಕಪ್ಪನ ಮಗ ನಾಗಲಿ ಇಲ್ಲವೆ ಅವನ ಕುಟುಂಬದಲ್ಲಿ ಸವಿಾಪ ವಾಗಿರುವ ಸಂಬಂಧಿಕರಲ್ಲಿ ಯಾರಾಗಲಿ ಅವನನ್ನು ವಿಮೋಚಿಸಬಹುದು. ಇಲ್ಲವೆ ಅವನು ಶಕ್ತನಾಗಿದ್ದರೆ ತನ್ನನ್ನು ತಾನೇ ವಿಮೋಚಿಸಿಕೊಳ್ಳಬಹುದು.

50ಅವನು ತನ್ನನ್ನು ಕೊಂಡುಕೊಂಡವನಿಗೆ ಮಾರಲ್ಪಟ್ಟ ವರುಷ ಮೊದಲುಗೊಂಡು ಜೂಬಿಲಿ ಸಂವತ್ಸರದ ವರೆಗೆ ಅವನೊಂದಿಗೆ ಲೆಕ್ಕಮಾಡಬೇಕು. ಅವನ ಮಾರಾಟದ ಕ್ರಯವು ವರುಷಗಳ ಲೆಕ್ಕದ ಪ್ರಕಾರ ಕೂಲಿಯಾಳಿನ ಸಮಯಕ್ಕೆ ತಕ್ಕಂತೆ ಅವನೊಂದಿಗೆ ಅದು ಇರುವದು.

51ಇನ್ನು ಬಹಳ ವರುಷವಿದ್ದರೆ ಅವುಗಳ ಪ್ರಕಾರ ತನ್ನ ಕ್ರಯದ ಹಣದಲ್ಲಿ ವಿಮೋಚಿಸಲ್ಪಡಬೇಕು.

ಯಾಜಕಕಾಂಡ 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी