ಹೀಗೆ ಅವರು ಹೊಂಚು ಹಾಕಿಕೊಂಡಿರುವದನ್ನು ಪೌಲನ ಸಹೋದರಿಯ ಮಗನು ಕೇಳಿ ಕೋಟೆಯೊಳಗೆ ಪ್ರವೇಶಿಸಿ ಪೌಲನಿಗೆ ತಿಳಿಸಿದನು.
14ಅವರು ಪ್ರಧಾನಯಾಜಕರ ಮತ್ತು ಹಿರಿಯರ ಬಳಿಗೆ ಬಂದು--ನಾವು ಪೌಲನನ್ನು ಕೊಲ್ಲುವ ತನಕ ಯಾವದನ್ನೂ ತಿನ್ನುವದಿಲ್ಲವೆಂದು ನಮಗೆ ನಾವೇ ದೊಡ್ಡ ಶಪಥವನ್ನು ಮಾಡಿಕೊಂಡಿದ್ದೇವೆ.
15ಆದ ಕಾರಣ ಈಗ ನೀವು ಪೌಲನ ವಿಷಯದಲ್ಲಿ ಇನ್ನೂ ಸಂಪೂರ್ಣವಾಗಿ ವಿಚಾರಿಸುವವರೋ ಎಂಬಂತೆ ಮುಖ್ಯನಾಯಕನು ಅವನನ್ನು ಮಾರನೆಯ ದಿನದಲ್ಲಿ ನಿಮ್ಮ ಬಳಿಗೆ ತರುವ ಹಾಗೆ ನೀವು ಆಲೋಚನಾ ಸಭೆಯೊಂದಿಗೆ ಅವನಿಗೆ ಸೂಚಿಸಿರಿ; ಅವನು ಹತ್ತಿರಕ್ಕೆ ಬರುವ ಮುಂಚೆಯೇ ನಾವು ಅವನನ್ನು ಕೊಲ್ಲುವದಕ್ಕೆ ಸಿದ
16ಹೀಗೆ ಅವರು ಹೊಂಚು ಹಾಕಿಕೊಂಡಿರುವದನ್ನು ಪೌಲನ ಸಹೋದರಿಯ ಮಗನು ಕೇಳಿ ಕೋಟೆಯೊಳಗೆ ಪ್ರವೇಶಿಸಿ ಪೌಲನಿಗೆ ತಿಳಿಸಿದನು.
17ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು--ಈ ಯೌವನಸ್ಥನನ್ನು ಮುಖ್ಯ ನಾಯಕನ ಬಳಿಗೆ ಕರಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ವಿಷಯ ಇದೆ ಎಂದು ಹೇಳಿದನು.
18ಇದರಿಂದ ಆ ಶತಾಧಿಪತಿಯು ಅವನನ್ನು ಮುಖ್ಯ ನಾಯಕನ ಬಳಿಗೆ ಕರೆದುಕೊಂಡು ಬಂದು--ನಿನಗೆ ಹೇಳಬೇಕಾದ ಒಂದು ವಿಷಯವು ಈ ಯೌವನಸ್ಥನಿಗೆ ಇರುವದರಿಂದ ಸೆರೆಯವನಾದ ಪೌಲನು ನನ್ನನ್ನು ಕರೆದು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬರುವಂತೆ ಬೇಡಿಕೊಂಡನು ಎಂದು ಹೇಳಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ