ಅಪೊಸ್ತಲರ ಕೃತ್ಯಗಳು 23:17

ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು--ಈ ಯೌವನಸ್ಥನನ್ನು ಮುಖ್ಯ ನಾಯಕನ ಬಳಿಗೆ ಕರಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ವಿಷಯ ಇದೆ ಎಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 23

15ಆದ ಕಾರಣ ಈಗ ನೀವು ಪೌಲನ ವಿಷಯದಲ್ಲಿ ಇನ್ನೂ ಸಂಪೂರ್ಣವಾಗಿ ವಿಚಾರಿಸುವವರೋ ಎಂಬಂತೆ ಮುಖ್ಯನಾಯಕನು ಅವನನ್ನು ಮಾರನೆಯ ದಿನದಲ್ಲಿ ನಿಮ್ಮ ಬಳಿಗೆ ತರುವ ಹಾಗೆ ನೀವು ಆಲೋಚನಾ ಸಭೆಯೊಂದಿಗೆ ಅವನಿಗೆ ಸೂಚಿಸಿರಿ; ಅವನು ಹತ್ತಿರಕ್ಕೆ ಬರುವ ಮುಂಚೆಯೇ ನಾವು ಅವನನ್ನು ಕೊಲ್ಲುವದಕ್ಕೆ ಸಿದ

16ಹೀಗೆ ಅವರು ಹೊಂಚು ಹಾಕಿಕೊಂಡಿರುವದನ್ನು ಪೌಲನ ಸಹೋದರಿಯ ಮಗನು ಕೇಳಿ ಕೋಟೆಯೊಳಗೆ ಪ್ರವೇಶಿಸಿ ಪೌಲನಿಗೆ ತಿಳಿಸಿದನು.

17ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು--ಈ ಯೌವನಸ್ಥನನ್ನು ಮುಖ್ಯ ನಾಯಕನ ಬಳಿಗೆ ಕರಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ವಿಷಯ ಇದೆ ಎಂದು ಹೇಳಿದನು.

18ಇದರಿಂದ ಆ ಶತಾಧಿಪತಿಯು ಅವನನ್ನು ಮುಖ್ಯ ನಾಯಕನ ಬಳಿಗೆ ಕರೆದುಕೊಂಡು ಬಂದು--ನಿನಗೆ ಹೇಳಬೇಕಾದ ಒಂದು ವಿಷಯವು ಈ ಯೌವನಸ್ಥನಿಗೆ ಇರುವದರಿಂದ ಸೆರೆಯವನಾದ ಪೌಲನು ನನ್ನನ್ನು ಕರೆದು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬರುವಂತೆ ಬೇಡಿಕೊಂಡನು ಎಂದು ಹೇಳಿದನು.

19ಆಗ ಮುಖ್ಯ ನಾಯಕನು ಅವನ ಕೈಹಿಡಿದು ಒಂದು ಕಡೆಗೆ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ--ನೀನು ನನಗೆ ಹೇಳಬೇಕಾದದ್ದು ಏನು ಎಂದು ಅವನನ್ನು ಕೇಳಿದನು.

ಅಪೊಸ್ತಲರ ಕೃತ್ಯಗಳು 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी