ಎಜ್ರನು 6:20

ಯಾಜಕರೂ ಲೇವಿಯರ ಕೂಡ ಶುದ್ಧಮಾಡಿ ಕೊಂಡಿದ್ದರು; ಅವರೆಲ್ಲರು ಶುಚಿಯಾಗಿದ್ದು ಸೆರೆಯ ಸಮಸ್ತ ಮಕ್ಕಳಿಗೋಸ್ಕರವೂ ಯಾಜಕರಾದ ತಮ್ಮ ಸಹೋದರರಿಗೋಸ್ಕರವೂ ತಮಗೋಸ್ಕರವೂ ಪಸ್ಕ ವನ್ನು ವಧಿಸಿದರು.

ಸಂದರ್ಭದೊಂದಿಗೆ ಓದಿ · ಎಜ್ರನು 6

18ಮೋಶೆಯ ಪುಸ್ತಕದಲ್ಲಿ ಬರೆಯಲ್ಪಟ್ಟ ಹಾಗೆ ಯೆರೂ ಸಲೇಮಿನಲ್ಲಿ ವಾಸವಾಗಿರುವ ದೇವರ ಆರಾಧನೆ ಗೋಸ್ಕರ ಯಾಜಕರನ್ನು ಅವರ ಸರತಿಯ ಪ್ರಕಾರವೂ ಲೇವಿಯರನ್ನು ಅವರ ಸರತಿಯ ಪ್ರಕಾರವೂ ನೇಮಿಸಿದರು.

19ಇದಲ್ಲದೆ ಸೆರೆಯ ಮಕ್ಕಳು ಮೊದಲನೇ ತಿಂಗಳಿನ ಹದಿನಾಲ್ಕನೇ ದಿವಸದಲ್ಲಿ ಪಸ್ಕವನ್ನು ಆಚರಿಸಿದರು.

20ಯಾಜಕರೂ ಲೇವಿಯರ ಕೂಡ ಶುದ್ಧಮಾಡಿ ಕೊಂಡಿದ್ದರು; ಅವರೆಲ್ಲರು ಶುಚಿಯಾಗಿದ್ದು ಸೆರೆಯ ಸಮಸ್ತ ಮಕ್ಕಳಿಗೋಸ್ಕರವೂ ಯಾಜಕರಾದ ತಮ್ಮ ಸಹೋದರರಿಗೋಸ್ಕರವೂ ತಮಗೋಸ್ಕರವೂ ಪಸ್ಕ ವನ್ನು ವಧಿಸಿದರು.

21ಹಾಗೆಯೇ ಸೆರೆಯಿಂದ ತಿರಿಗಿ ಬಂದ ಇಸ್ರಾಯೇಲ್‌ ಮಕ್ಕಳು ಇಸ್ರಾಯೇಲ್‌ ದೇವ ರಾಗಿರುವ ಕರ್ತನನ್ನು ಹುಡುಕಲು ದೇಶದ ಜನಾಂಗ ಗಳ ಅಶುಚಿಯಿಂದ ತಮ್ಮನ್ನು ಪ್ರತ್ಯೇಕಿಸಿ ಕೊಂಡು ಅವರ ಕಡೆಗೆ ಸೇರಿದ ಸಮಸ್ತರೂ ಅದನ್ನು ತಿಂದು ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಸಂತೋಷದಿಂದ ಏಳು ದಿವಸ ಆಚರಿಸಿದರು.

22ಇಸ್ರಾಯೇಲ್‌ ದೇವ ರಾಗಿರುವ ದೇವರ ಆಲಯದ ಕಾರ್ಯದಲ್ಲಿ ಅವರ ಕೈಗಳನ್ನು ಬಲಪಡಿಸುವದಕ್ಕೆ ಅಶ್ಶೂರ್‌ ದೇಶದ ಅರ ಸನ ಹೃದಯವನ್ನು ಅವರ ಕಡೆಗೆ ತಿರುಗಿಸಿದ್ದರಿಂದ ಕರ್ತನು ಅವರನ್ನು ಸಂತೋಷಪಡಿಸಿದನು.

ಎಜ್ರನು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी