ಪ್ರಲಾಪಗಳು 4:14

ಅವರು ಬೀದಿಗಳಲ್ಲಿ ಕುರುಡರಂತೆ ಅಲೆದಾಡಿದರು, ಅವರು ರಕ್ತದಿಂದ ತಮ್ಮನ್ನು ತಾವೇ ಅಪವಿತ್ರಪಡಿಸಿ ಕೊಂಡರು; ಆದದರಿಂದ ಮನುಷ್ಯರು ಅವರ ವಸ್ತ್ರಗಳನ್ನು ಮುಟ್ಟಲಾರದೆ ಹೋದರು.

ಸಂದರ್ಭದೊಂದಿಗೆ ಓದಿ · ಪ್ರಲಾಪಗಳು 4

12ಭೂ ರಾಜರೂ ವಿರೋಧಿಯೂ ಶತ್ರುವೂ ಯೆರೂಸಲೇ ಮಿನಲ್ಲಿ ಪ್ರವೇಶಿಸಿದ್ದನ್ನು ಪ್ರಪಂಚದ ಎಲ್ಲಾ ನಿವಾಸಿಗಳೂ ನಂಬುತ್ತಿರಲಿಲ್ಲ.

13ಅವಳ ಪ್ರವಾದಿಗಳ ಪಾಪಗಳಿಗೋಸ್ಕರವೂ ಅವಳ ಯಾಜಕರ ಅಕ್ರಮಗಳಿ ಗೋಸ್ಕರವೂ ಹೀಗಾಯಿತು. ಯಾಕಂದರೆ ಇವರು ನೀತಿವಂತರ ರಕ್ತವನ್ನು ಅವಳ ಮಧ್ಯ ಚೆಲ್ಲಿದ್ದರು.

14ಅವರು ಬೀದಿಗಳಲ್ಲಿ ಕುರುಡರಂತೆ ಅಲೆದಾಡಿದರು, ಅವರು ರಕ್ತದಿಂದ ತಮ್ಮನ್ನು ತಾವೇ ಅಪವಿತ್ರಪಡಿಸಿ ಕೊಂಡರು; ಆದದರಿಂದ ಮನುಷ್ಯರು ಅವರ ವಸ್ತ್ರಗಳನ್ನು ಮುಟ್ಟಲಾರದೆ ಹೋದರು.

15ಅವರು ಜನರಿಗೆ--ನೀವು ಸರಿಯಿರಿ ಇದು ಅಶುದ್ಧವಾಗಿದೆ; ಸರಿಯಿರಿ, ಸರಿಯಿರಿ; ಮುಟ್ಟಬೇಡಿರಿ ಎಂದು ಕೂಗಿ ಕೊಂಡರು. ಅವರು ಓಡಿಹೋಗಿ ಅಲೆದಾಡುತ್ತಿರು ವಾಗ--ಅವರು ಇನ್ನು ಮೇಲೆ ಅಲ್ಲಿ ವಾಸಮಾಡು ವದಿಲ್ಲ ಎಂದು ಅನ್ಯ ಜನಾಂಗಗಳೊಳಗೆ ಹೇಳಿದರು.

16ಕರ್ತನ ಕೋಪವು ಅವರನ್ನು ವಿಭಾಗಿಸಿತು; ಆತನು ಇನ್ನು ಅವರನ್ನು ಲಕ್ಷಿಸುವದಿಲ್ಲ; ಅವರು ಯಾಜಕರನ್ನು ಗೌರವಿಸಲಿಲ್ಲ; ಅವರು ಹಿರಿಯರಿಗೆ ದಯೆತೋರಿ ಸಲಿಲ್ಲ.

ಪ್ರಲಾಪಗಳು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी