ಇಗೋ, ಹೆಚ್ಚಿಸಿಕೊಂಡವನ ಆತ್ಮವು ತನ್ನಲ್ಲಿ ಯಥಾರ್ಥವಲ್ಲ; ಆದರೆ ನೀತಿವಂತನು ತನ್ನ ವಿಶ್ವಾಸದಿಂದ ಬದುಕುವನು.
2ಆಗ ಕರ್ತನು ನನಗೆ ಉತ್ತರಕೊಟ್ಟು ಹೇಳಿದ್ದೇ ನಂದರೆ--ದರ್ಶನವನ್ನು ಬರೆ; ಓದುವವನು ಶೀಘ್ರ ವಾಗಿ ಓದುವಂತೆ ಅದನ್ನು ಹಲಗೆಗಳ ಮೇಲೆ ಕೆತ್ತು.
3ದರ್ಶನವು ಇನ್ನು ನೇಮಕವಾದ ಕಾಲಕ್ಕೆ ಉಂಟು; ಆದರೆ ಕಡೆಯಲ್ಲಿ ಅದು ಸುಳ್ಳಾಗದೆ ಮಾತನಾಡುವದು; ಅದು ತಡವಾ ದರೂ ಅದಕ್ಕೆ ಕಾದುಕೊಂಡಿರು; ಅದು ತಡಮಾಡದೆ ನಿಶ್ಚಯವಾಗಿ ಬರುವದು.
4ಇಗೋ, ಹೆಚ್ಚಿಸಿಕೊಂಡವನ ಆತ್ಮವು ತನ್ನಲ್ಲಿ ಯಥಾರ್ಥವಲ್ಲ; ಆದರೆ ನೀತಿವಂತನು ತನ್ನ ವಿಶ್ವಾಸದಿಂದ ಬದುಕುವನು.
5ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ.
6ಇವರೆಲ್ಲರು ಅವನ ಮೇಲೆ ಸಾಮ್ಯವನ್ನೂ ಹಾಸ್ಯದ ಸಾಮತಿಯನ್ನೂ ಎತ್ತಿ--ತನಗಲ್ಲದ್ದನ್ನು ಹೆಚ್ಚಿಸಿಕೊಳ್ಳು ವವನಿಗೆ ಅಯ್ಯೋ! ಅದು ಎಷ್ಟರ ವರೆಗೆ? ತಾನಾಗಿ ತನ್ನ ಮೇಲೆ ಗಟ್ಟಿ ಮಣ್ಣನ್ನು ಹೊತ್ತುಕೊಳ್ಳುವವನಿಗೆ ಅಯ್ಯೋ ಎಂದು ಹೇಳರೋ?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ