ಹಬಕ್ಕೂಕ್ಕ 2:3

ದರ್ಶನವು ಇನ್ನು ನೇಮಕವಾದ ಕಾಲಕ್ಕೆ ಉಂಟು; ಆದರೆ ಕಡೆಯಲ್ಲಿ ಅದು ಸುಳ್ಳಾಗದೆ ಮಾತನಾಡುವದು; ಅದು ತಡವಾ ದರೂ ಅದಕ್ಕೆ ಕಾದುಕೊಂಡಿರು; ಅದು ತಡಮಾಡದೆ ನಿಶ್ಚಯವಾಗಿ ಬರುವದು.

ಸಂದರ್ಭದೊಂದಿಗೆ ಓದಿ · ಹಬಕ್ಕೂಕ್ಕ 2

1ನನ್ನ ಕಾವಲಲ್ಲಿ ನಿಂತು ಗೋಪುರದ ಮೇಲೆ ನೆಲೆಯಾಗಿದ್ದು ಆತನು ನನಗೆ ಏನು ಹೇಳುವನೋ, ನನ್ನ ತರ್ಕದ ವಿಷಯ ಏನು ಉತ್ತರ ಕೊಡಬೇಕೋ ನೋಡುವದಕ್ಕೆ ಕಾದುಕೊಂಡಿರುವೆನು.

2ಆಗ ಕರ್ತನು ನನಗೆ ಉತ್ತರಕೊಟ್ಟು ಹೇಳಿದ್ದೇ ನಂದರೆ--ದರ್ಶನವನ್ನು ಬರೆ; ಓದುವವನು ಶೀಘ್ರ ವಾಗಿ ಓದುವಂತೆ ಅದನ್ನು ಹಲಗೆಗಳ ಮೇಲೆ ಕೆತ್ತು.

3ದರ್ಶನವು ಇನ್ನು ನೇಮಕವಾದ ಕಾಲಕ್ಕೆ ಉಂಟು; ಆದರೆ ಕಡೆಯಲ್ಲಿ ಅದು ಸುಳ್ಳಾಗದೆ ಮಾತನಾಡುವದು; ಅದು ತಡವಾ ದರೂ ಅದಕ್ಕೆ ಕಾದುಕೊಂಡಿರು; ಅದು ತಡಮಾಡದೆ ನಿಶ್ಚಯವಾಗಿ ಬರುವದು.

4ಇಗೋ, ಹೆಚ್ಚಿಸಿಕೊಂಡವನ ಆತ್ಮವು ತನ್ನಲ್ಲಿ ಯಥಾರ್ಥವಲ್ಲ; ಆದರೆ ನೀತಿವಂತನು ತನ್ನ ವಿಶ್ವಾಸದಿಂದ ಬದುಕುವನು.

5ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ.

ಹಬಕ್ಕೂಕ್ಕ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी