ಆದದರಿಂದ ಕರ್ತನು ನನ್ನ ನೀತಿಯ ಪ್ರಕಾರವಾಗಿಯೂ ಆತನ ಕಣ್ಣುಗಳ ಮುಂದಿನ ನನ್ನ ಶುದ್ಧತ್ವದ ಪ್ರಕಾರವಾಗಿಯೂ ನನಗೆ ಬದಲುಕೊಟ್ಟನು.
23ಆತನ ನ್ಯಾಯಗಳೆಲ್ಲಾ ನನ್ನ ಮುಂದೆ ಇದ್ದವು; ಆತನ ನಿಯಮ ಗಳನ್ನು ನನ್ನಿಂದ ಹೋಗಲಿಲ್ಲ.
24ಆತನ ಮುಂದೆ ಸಂಪೂರ್ಣನಾಗಿದ್ದು ಅಕ್ರಮದಿಂದ ನನ್ನನ್ನು ತಪ್ಪಿಸಿ ಕಾಪಾಡಿಕೊಂಡೆನು.
25ಆದದರಿಂದ ಕರ್ತನು ನನ್ನ ನೀತಿಯ ಪ್ರಕಾರವಾಗಿಯೂ ಆತನ ಕಣ್ಣುಗಳ ಮುಂದಿನ ನನ್ನ ಶುದ್ಧತ್ವದ ಪ್ರಕಾರವಾಗಿಯೂ ನನಗೆ ಬದಲುಕೊಟ್ಟನು.
26ಕೃಪೆಯುಳ್ಳವನಿಗೆ ಕೃಪೆಯುಳ್ಳವ ನಾಗಿರುವಿ; ಸಂಪೂರ್ಣನಾದ ಮನುಷ್ಯನಿಗೆ ಸಂಪೂರ್ಣನಾಗಿರುವಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ