ಆದಿಕಾಂಡ 29:9

ಯಾಕೋಬನು ಇನ್ನೂ ಅವರ ಸಂಗಡ ಮಾತನಾಡು ತ್ತಿದ್ದಾಗ ಕುರಿಗಳನ್ನು ಮೇಯಿಸುವವಳಾಗಿದ್ದ ರಾಹೇ ಲಳು ತನ್ನ ತಂದೆಯ ಕುರಿಗಳ ಸಂಗಡ ಬಂದಳು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 29

7ಅವನು ಅವರಿಗೆ--ಇಗೋ, ಇನ್ನೂ ಹೊತ್ತು ಬಹಳವಿದೆ; ಮಂದೆಗಳನ್ನು ಕೂಡಿಸುವ ಸಮಯವು ಇದಲ್ಲ; ಕುರಿಗಳಿಗೆ ನೀರು ಕುಡಿಸಿ ಹೋಗಿ ಮೇಯಿಸಿರಿ ಅಂದನು.

8ಅದಕ್ಕೆ ಅವರು--ಮಂದೆಗಳನ್ನೆಲ್ಲಾ ಒಟ್ಟುಗೂಡಿಸಿದ ಮೇಲೆ ಬಾವಿಯ ಮೇಲಿರುವ ಕಲ್ಲನ್ನು ಮುಚ್ಚುತ್ತಾರೆ; ಆಗ ನಾವು ಕುರಿಗಳಿಗೆ ನೀರನ್ನು ಕುಡಿಸುತ್ತೇವೆ ಅಂದರು.

9ಯಾಕೋಬನು ಇನ್ನೂ ಅವರ ಸಂಗಡ ಮಾತನಾಡು ತ್ತಿದ್ದಾಗ ಕುರಿಗಳನ್ನು ಮೇಯಿಸುವವಳಾಗಿದ್ದ ರಾಹೇ ಲಳು ತನ್ನ ತಂದೆಯ ಕುರಿಗಳ ಸಂಗಡ ಬಂದಳು.

10ಯಾಕೋಬನು ತನ್ನ ತಾಯಿಯ ಸಹೋದರನಾದ ಲಾಬಾನನ ಮಗಳಾದ ರಾಹೇಲಳನ್ನೂ ಅವನ ಕುರಿಗಳನ್ನೂ ನೋಡಿದಾಗ ಯಾಕೋಬನು ಹತ್ತಿರ ಬಂದು ಬಾವಿಯ ಮೇಲಿದ್ದ ಕಲ್ಲನ್ನು ಹೊರಳಿಸಿ ತನ್ನ ತಾಯಿಯ ಸಹೋದರನಾದ ಲಾಬಾನನ ಕುರಿಗಳಿಗೆ ನೀರನ್ನು ಕುಡಿಸಿದನು.

11ಆಗ ಯಾಕೋ ಬನು ರಾಹೇಲಳಿಗೆ ಮುದ್ದಿಟ್ಟು ತನ್ನ ಸ್ವರವನ್ನೆತ್ತಿ ಗಟ್ಟಿಯಾಗಿ ಅತ್ತನು.

ಆದಿಕಾಂಡ 29 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी