ಎಜ್ರನು 5:10

ಇದಲ್ಲದೆ ಅವರಲ್ಲಿರುವ ಮುಖ್ಯಸ್ಥರ ಮನುಷ್ಯರ ಹೆಸರುಗಳನ್ನು ನಿನಗೆ ಬರೆದು ತಿಳಿಸುವ ಹಾಗೆ ಅವರ ಹೆಸರುಗಳನ್ನು ಕೇಳಿದೆವು.

ಸಂದರ್ಭದೊಂದಿಗೆ ಓದಿ · ಎಜ್ರನು 5

8ಅರಸನಾದ ದಾರ್ಯಾವೆಷನಿಗೆ ಸಮಸ್ತ ಸಮಾ ಧಾನವು. ಅರಸನಿಗೆ ತಿಳಿಯಬೇಕಾದದ್ದೇನಂದರೆ--ನಾವು ಯೆಹೂದ್ಯರ ದೇಶದಲ್ಲಿರುವ ಮಹಾದೇವರ ಆಲಯಕ್ಕೆ ಹೋದೆವು; ಅದು ದೊಡ್ಡ ಕಲ್ಲುಗಳಿಂದ ಕಟ್ಟಲ್ಪಟ್ಟಿದೆ; ಗೋಡೆಗಳ ಮೇಲೆ ತೊಲೆಗಳು ಹೊದಿಸ ಲ್ಪಟ್ಟಿವೆ; ಆ ಕೆಲಸವು ತೀವ್ರವಾಗಿ ನಡೆಯುತ್ತಾ ಅವರ ಕೈಗಳಲ್ಲಿ ವೃದ್ಧಿಯಾಗುತ್ತದೆ.

9ಆಗ ಈ ಮನೆಯನ್ನು ಕಟ್ಟಿಸುವದಕ್ಕೂ ಈ ಗೋಡೆಗಳನ್ನು ತೀರಿಸುವದಕ್ಕೂ ನಿಮಗೆ ಅಪ್ಪಣೆಕೊಟ್ಟವರು ಯಾರೆಂದು ನಾವು ಆ ಹಿರಿಯರನ್ನು ಕೇಳಿದೆವು.

10ಇದಲ್ಲದೆ ಅವರಲ್ಲಿರುವ ಮುಖ್ಯಸ್ಥರ ಮನುಷ್ಯರ ಹೆಸರುಗಳನ್ನು ನಿನಗೆ ಬರೆದು ತಿಳಿಸುವ ಹಾಗೆ ಅವರ ಹೆಸರುಗಳನ್ನು ಕೇಳಿದೆವು.

11ಅವರು ನಮಗೆ ಕೊಟ್ಟ ಪ್ರತ್ಯುತ್ತರವೇನಂದರೆನಾವು ಪರಲೋಕ ಮತ್ತು ಭೂಲೋಕಗಳ ದೇವರ ಸೇವಕರಾಗಿದ್ದೇವೆ. ಅನೇಕ ವರುಷಗಳ ಹಿಂದೆ ಇಸ್ರಾ ಯೇಲಿನಲ್ಲಿದ್ದ ಒಬ್ಬ ಮಹಾ ಅರಸನು ಕಟ್ಟಿಸಿ ತೀರಿಸಿದ್ದ ಆಲಯವನ್ನು ನಾವು ಕಟ್ಟಿಸುತ್ತೇವೆ.

12ಆದರೆ ನಮ್ಮ ತಂದೆಗಳು ಪರಲೋಕದ ದೇವರಿಗೆ ಕೋಪವನ್ನು ಎಬ್ಬಿಸಿದ ತರುವಾಯ ಆತನು ಅವರನ್ನು ಬಾಬೆಲಿನ ಅರಸನಾಗಿದ್ದ ಕಸ್ದೀಯರ ದೇಶದವನಾದ ನೆಬೂಕ ದ್ನೆಚ್ಚರನ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವನು ಈ ಆಲಯವನ್ನು ಹಾಳುಮಾಡಿ ಜನರನ್ನು ಬಾಬೆಲಿಗೆ ತಕ್ಕೊಂಡು ಹೋದನು.

ಎಜ್ರನು 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी