೧ ಅರಸುಗಳು 20:29

ಏಳು ದಿವಸ ಇವರು ಅವರಿಗೆ ಎದುರಾಗಿ ದಂಡಿಳಿದಿದ್ದರು. ಆದರೆ ಏಳನೇ ದಿವಸದಲ್ಲಿ ಯುದ್ಧಕ್ಕೆ ಕೂಡಿದಾಗ ಇಸ್ರಾಯೇಲಿನ ಮಕ್ಕಳು ಅರಾಮ್ಯದಲ್ಲಿ ಲಕ್ಷ ಕಾಲ್ಬಲವನ್ನು ಒಂದೇ ದಿವಸದಲ್ಲಿ ಸಂಹರಿಸಿದರು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 20

27ಆದದರಿಂದ ಇಸ್ರಾಯೇಲಿನ ಮಕ್ಕಳು ಲೆಕ್ಕ ಮಾಡಲ್ಪಟ್ಟು ಬೇಕಾದದ್ದನ್ನು ಸಿದ್ಧಮಾಡಿಕೊಂಡು ಅವರಿಗೆ ಎದುರಾಗಿ ಹೊರಟರು. ಇಸ್ರಾಯೇಲಿನ ಮಕ್ಕಳು ಅವರಿಗೆದುರಾಗಿ ದಂಡಿಳಿದಿರುವಾಗ ಅವರು ಮೇಕೆ ಮರಿಗಳ ಎರಡು ಮಂದೆಗಳ ಹಾಗಿದ್ದರು; ಆದರೆ ಅರಾಮ್ಯರು ದೇಶವನ್ನು ತುಂಬಿಕೊಂಡಿದ್ದರು.

28ಆಗ ದೇವರ ಮನುಷ್ಯನೊಬ್ಬನು ಬಂದು ಇಸ್ರಾ ಯೇಲಿನ ಅರಸನಿಗೆ--ಕರ್ತನು ತಗ್ಗುಗಳ ದೇವರಾ ಗಿರದೆ ಪರ್ವತಗಳ ದೇವರಾಗಿದ್ದಾನೆಂಬದಾಗಿ ಅರಾ ಮ್ಯರು ಹೇಳಿದ್ದರಿಂದ ನಾನು ಕರ್ತನಾಗಿದ್ದೇನೆಂದು ನೀವು ತಿಳಿಯುವ ಹಾಗೆ ಆ ದೊಡ್ಡ ಸಮೂಹವನ್ನೆಲ್ಲಾ ನಿನ್ನ ಕೈಯಲ್ಲಿ ಒಪ್ಪಿಸುವೆನೆಂದು ಕರ್ತನು ಹೇಳುತ್ತಾನೆ ಅಂದನು.

29ಏಳು ದಿವಸ ಇವರು ಅವರಿಗೆ ಎದುರಾಗಿ ದಂಡಿಳಿದಿದ್ದರು. ಆದರೆ ಏಳನೇ ದಿವಸದಲ್ಲಿ ಯುದ್ಧಕ್ಕೆ ಕೂಡಿದಾಗ ಇಸ್ರಾಯೇಲಿನ ಮಕ್ಕಳು ಅರಾಮ್ಯದಲ್ಲಿ ಲಕ್ಷ ಕಾಲ್ಬಲವನ್ನು ಒಂದೇ ದಿವಸದಲ್ಲಿ ಸಂಹರಿಸಿದರು.

30ಮಿಕ್ಕಾದವರು ಅಫೇಕ್‌ ಪಟ್ಟಣದೊಳಗೆ ಓಡಿ ಹೋದರು. ಅಲ್ಲಿ ಒಂದು ಗೋಡೆಯು ಉಳಿದ ಇಪ್ಪತ್ತೇಳು ಸಾವಿರ ಮಂದಿಯ ಮೇಲೆ ಬಿತ್ತು. ಆದರೆ ಬೆನ್ಹದದನು ಪಟ್ಟಣಕ್ಕೆ ಓಡಿಬಂದು ಕೊಠಡಿಯ ಒಳ ಕೊಠಡಿಯಲ್ಲಿ ಬಚ್ಚಿಟ್ಟುಕೊಂಡನು.

31ಆಗ ಅವನ ಸೇವಕರು ಅವನಿಗೆ -- ಇಗೋ, ಇಸ್ರಾಯೇಲಿನ ಮನೆಯ ಅರಸುಗಳು ಕರುಣೆಯುಳ್ಳವರೆಂದು ನಾವು ಕೇಳಿದ್ದೇವೆ; ನಾವು ಗೋಣಿಯನ್ನು ನಡುವಿನಲ್ಲಿ ಕಟ್ಟಿ ಕೊಂಡು ಹಗ್ಗಗಳನ್ನು ನಮ್ಮ ತಲೆಗಳಲ್ಲಿ ಸುತ್ತಿಕೊಂಡು ಇಸ್ರಾಯೇಲಿನ ಅರಸನ ಬಳಿಗೆ ಹೋಗೋಣ; ಒಂದು ವೇಳೆ ಅವನು ನಿನ್ನ ಪ್ರಾಣವನ್ನು ರಕ್ಷಿಸುವನು ಅಂದರು.

೧ ಅರಸುಗಳು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी