೧ ಅರಸುಗಳು 20:28

ಆಗ ದೇವರ ಮನುಷ್ಯನೊಬ್ಬನು ಬಂದು ಇಸ್ರಾ ಯೇಲಿನ ಅರಸನಿಗೆ--ಕರ್ತನು ತಗ್ಗುಗಳ ದೇವರಾ ಗಿರದೆ ಪರ್ವತಗಳ ದೇವರಾಗಿದ್ದಾನೆಂಬದಾಗಿ ಅರಾ ಮ್ಯರು ಹೇಳಿದ್ದರಿಂದ ನಾನು ಕರ್ತನಾಗಿದ್ದೇನೆಂದು ನೀವು ತಿಳಿಯುವ ಹಾಗೆ ಆ ದೊಡ್ಡ ಸಮೂಹವನ್ನೆಲ್ಲಾ ನಿನ್ನ ಕೈಯಲ್ಲಿ ಒಪ್ಪಿಸುವೆನೆಂದು ಕರ್ತನು ಹೇಳುತ್ತಾನೆ ಅಂದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 20

26ವರುಷಾಂತರದಲ್ಲಿ ಏನಾಯಿತಂದರೆ ಬೆನ್ಹದದನು ಅರಾಮ್ಯರನ್ನು ಲೆಕ್ಕಿಸಿ ಇಸ್ರಾಯೇಲಿನ ಸಂಗಡ ಯುದ್ಧ ಮಾಡಲು ಅಫೇಕಿಗೆ ಹೋದನು.

27ಆದದರಿಂದ ಇಸ್ರಾಯೇಲಿನ ಮಕ್ಕಳು ಲೆಕ್ಕ ಮಾಡಲ್ಪಟ್ಟು ಬೇಕಾದದ್ದನ್ನು ಸಿದ್ಧಮಾಡಿಕೊಂಡು ಅವರಿಗೆ ಎದುರಾಗಿ ಹೊರಟರು. ಇಸ್ರಾಯೇಲಿನ ಮಕ್ಕಳು ಅವರಿಗೆದುರಾಗಿ ದಂಡಿಳಿದಿರುವಾಗ ಅವರು ಮೇಕೆ ಮರಿಗಳ ಎರಡು ಮಂದೆಗಳ ಹಾಗಿದ್ದರು; ಆದರೆ ಅರಾಮ್ಯರು ದೇಶವನ್ನು ತುಂಬಿಕೊಂಡಿದ್ದರು.

28ಆಗ ದೇವರ ಮನುಷ್ಯನೊಬ್ಬನು ಬಂದು ಇಸ್ರಾ ಯೇಲಿನ ಅರಸನಿಗೆ--ಕರ್ತನು ತಗ್ಗುಗಳ ದೇವರಾ ಗಿರದೆ ಪರ್ವತಗಳ ದೇವರಾಗಿದ್ದಾನೆಂಬದಾಗಿ ಅರಾ ಮ್ಯರು ಹೇಳಿದ್ದರಿಂದ ನಾನು ಕರ್ತನಾಗಿದ್ದೇನೆಂದು ನೀವು ತಿಳಿಯುವ ಹಾಗೆ ಆ ದೊಡ್ಡ ಸಮೂಹವನ್ನೆಲ್ಲಾ ನಿನ್ನ ಕೈಯಲ್ಲಿ ಒಪ್ಪಿಸುವೆನೆಂದು ಕರ್ತನು ಹೇಳುತ್ತಾನೆ ಅಂದನು.

29ಏಳು ದಿವಸ ಇವರು ಅವರಿಗೆ ಎದುರಾಗಿ ದಂಡಿಳಿದಿದ್ದರು. ಆದರೆ ಏಳನೇ ದಿವಸದಲ್ಲಿ ಯುದ್ಧಕ್ಕೆ ಕೂಡಿದಾಗ ಇಸ್ರಾಯೇಲಿನ ಮಕ್ಕಳು ಅರಾಮ್ಯದಲ್ಲಿ ಲಕ್ಷ ಕಾಲ್ಬಲವನ್ನು ಒಂದೇ ದಿವಸದಲ್ಲಿ ಸಂಹರಿಸಿದರು.

30ಮಿಕ್ಕಾದವರು ಅಫೇಕ್‌ ಪಟ್ಟಣದೊಳಗೆ ಓಡಿ ಹೋದರು. ಅಲ್ಲಿ ಒಂದು ಗೋಡೆಯು ಉಳಿದ ಇಪ್ಪತ್ತೇಳು ಸಾವಿರ ಮಂದಿಯ ಮೇಲೆ ಬಿತ್ತು. ಆದರೆ ಬೆನ್ಹದದನು ಪಟ್ಟಣಕ್ಕೆ ಓಡಿಬಂದು ಕೊಠಡಿಯ ಒಳ ಕೊಠಡಿಯಲ್ಲಿ ಬಚ್ಚಿಟ್ಟುಕೊಂಡನು.

೧ ಅರಸುಗಳು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी