ಈ ಕಾರಣಕ್ಕಾಗಿಯೇ ನೀವು ಆನಂದಿಸಿರಿ, ನನ್ನೊಂದಿಗೆ ಸಂತೊಷಪಡಿರಿ.
16ಹೀಗೆ ನಾನು ಕೆಲಸ ಸಾಧಿಸಿದ್ದೂ ಪ್ರಯಾಸಪಟ್ಟದ್ದೂ ವ್ಯರ್ಥವಾಗಲಿಲ್ಲ ವೆಂದು ತಿಳಿದು ಕ್ರಿಸ್ತನ ದಿನದಲ್ಲಿ ಸಂತೋಷಪಡುವೆನು.
17ಹೌದು, ನಿಮ್ಮ ನಂಬಿಕೆಯೆಂಬ ಯಜ್ಞವನ್ನು ಅರ್ಪಿಸುವ ಸೇವೆಯಲ್ಲಿ ನಾನೇ ಅರ್ಪಿತವಾಗ ಬೇಕಾದರೂ ನಾನು ಹರ್ಷಗೊಂಡು ನಿಮ್ಮೆಲ್ಲರ ಕೂಡ ಸಂತೋಷಿಸುವೆನು.
18ಈ ಕಾರಣಕ್ಕಾಗಿಯೇ ನೀವು ಆನಂದಿಸಿರಿ, ನನ್ನೊಂದಿಗೆ ಸಂತೊಷಪಡಿರಿ.
19ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸುವದಕ್ಕೆ ಕರ್ತನಾದ ಯೇಸುವಿನಲ್ಲಿ ನಿರೀಕ್ಷಿಸುತ್ತೇನೆ. ಅವನ ಮುಖಾಂತರ ನಿಮ್ಮ ವಿಷಯವನ್ನು ತಿಳಿದು ನಾನು ಸಹ ಆದರಣೆಹೊಂದೇನು.
20ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಸ್ವಾಭಾವಿಕವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ