ಆದರೆ ಫಿಲಿಷ್ಟಿಯರು ಮತ್ತೆ ಬಂದು ತಗ್ಗಿನಲ್ಲಿ ವಿಸ್ತಾರವಾಗಿ ಇಳುಕೊಂಡರು.
11ಹಾಗೆಯೇ ಅವರು ಬಾಳ್ಪೆರಾಚೀಮಿಗೆ ಬಂದ ಮೇಲೆ ದಾವೀದನು ಅಲ್ಲಿ ಅವರನ್ನು ಸಂಹರಿಸಿದನು. ಆಗ ದಾವೀದನು--ನೀರು ಕೊಚ್ಚಿಕೊಂಡು ಹೋಗುವ ಹಾಗೆ ದೇವರು ನನ್ನ ಕೈಯಿಂದ ನನ್ನ ಶತ್ರುಗಳನ್ನು ನಾಶಮಾಡಿದ್ದಾನೆ ಅಂದನು. ಆದಕಾರಣ ಆ ಸ್ಥಳಕ್ಕೆ ಬಾಳ್ಪೆರಾಚೀಮು ಎಂದು ಹೆಸರಿಟ್ಟನು.
12ಫಿಲಿಷ್ಟಿಯರು ತಮ್ಮ ದೇವರು ಗಳನ್ನು ಅಲ್ಲಿ ಬಿಟ್ಟುಬಿಟ್ಟದ್ದರಿಂದ ದಾವೀದನು ಅಪ್ಪಣೆ ಕೊಟ್ಟಾಗ ಬೆಂಕಿಯಿಂದ ಅವು ಸುಡಲ್ಪಟ್ಟವು.
13ಆದರೆ ಫಿಲಿಷ್ಟಿಯರು ಮತ್ತೆ ಬಂದು ತಗ್ಗಿನಲ್ಲಿ ವಿಸ್ತಾರವಾಗಿ ಇಳುಕೊಂಡರು.
14ಆದದರಿಂದ ದಾವೀ ದನು ತಿರಿಗಿ ದೇವರನ್ನು ವಿಚಾರಿಸಿದನು. ಆಗ ದೇವರು ಅವನಿಗೆ--ನೀನು ಅವರ ಹಿಂದೆ ಹೋಗದೆ ಅವರನ್ನು ಬಿಟ್ಟು ತಿರುಗಿ ಹಿಪ್ಪಲಿ ಮರಗಳಿಗೆದುರಾಗಿ ಅವರ ಮೇಲೆ ಬಂದು ಬೀಳು.
15ಹಿಪ್ಪಲಿ ಮರಗಳ ತುದಿಗಳಲ್ಲಿ ನಡೆದು ಬರುವ ಶಬ್ದವನ್ನು ನೀನು ಕೇಳಿದಾಗಲೇ ಯುದ್ಧಕ್ಕೆ ಹೊರಟುಹೋಗು; ಯಾಕಂದರೆ ಫಿಲಿಷ್ಟಿಯರ ದಂಡನ್ನು ಹೊಡೆಯಲು ದೇವರು ನಿನ್ನ ಮುಂದಾಗಿ ಹೊರಟಿದ್ದಾನೆ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ